ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಪಾನ್‌ನಿಂದ 10,535 ಕೋಟಿ ರೂ. ಹೂಡಿಕೆ (Infra projects | India | Japan | MRTS | Agreement)
Bookmark and Share Feedback Print
 
ದೆಹಲಿಯ ಮಾಸ್ ರಾಪಿಡ್ ಟ್ರಾನ್ಸಪೋರ್ಟ್ ಸಿಸ್ಟಂ‌ನ ಎರಡನೇ ಹಂತ ಸೇರಿದಂತೆ, ಇತರ ಆರು ಮೆಗಾ ಮೂಲಸೌಕರ್ಯ ಕ್ಷೇತ್ರಗಳಲ್ಲಿ 10,535 ಕೋಟಿ ರೂಪಾಯಿಗಳ ಹೂಡಿಕೆಗಾಗಿ ಜಪಾನ್ ನಿರ್ಧರಿಸಿದೆ ಮೂಲಗಳು ತಿಳಿಸಿವೆ.

ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ಹಾಗೂ ಭಾರತದಲ್ಲಿರುವ ಜಪಾನ್ ರಾಯಭಾರಿ ಹಿಡೆಕಿ ಡೊಮಿಚಿ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈ ಒಪ್ಪಂದದೊಂದಿಗೆ ಜಪಾನ್,ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ 1,55,840 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದಂತಾಗಿದೆ ಎಂದು ವಿತ್ತಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಮಾಸ್ ರಾಪಿಡ್ ಟ್ರಾನ್ಸಪೋರ್ಟ್ ಸಿಸ್ಟಂನ ಎರಡನೇ ಹಂತದ ಮೂಲಸೌಕರ್ಯ ಕ್ಷೇತ್ರದಲ್ಲಿ 1,648 ಕೋಟಿ ರೂಪಾಯಿಗಳನ್ನು ಜಪಾನ್ ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತಾದ ಈಸ್ಟ್‌-ವೆಸ್ಟ್ ಮೆಟ್ರೋ ಪ್ರೊಜೆಕ್ಟ್‌ನ ಎರಡನೇ ಹಂತಕ್ಕೆ 1,146 ಕೋಟಿ ರೂಪಾಯಿ,ಚೆನ್ನೈ ಮೆಟ್ರೋ ಪ್ರೊಜೆಕ್ಟ್‌‌ನ ಎರಡನೇ ಹಂತಕ್ಕೆ 4,422 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ವಿತ್ತಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ