ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯುರೋ-4: ಏಪ್ರಿಲ್‌ನಿಂದ ಕಾರು ದರಗಳಲ್ಲಿ ಹೆಚ್ಚಳ (Euro IV | Emission norms | Tata Motors | Fiat | Hyundai | Euro III)
Bookmark and Share Feedback Print
 
ಪರಿಸರ ಸ್ನೇಹಿ ಯುರೋ-4 ಇಂಧನಕ್ಕಾಗಿ ನೂತನ ಕೆಲ ಯಂತ್ರಗಳನ್ನು ಅಳವಡಿಸಬೇಕಾದ ಹಿನ್ನೆಲೆಯಲ್ಲಿ, ಮುಂದಿನ ತಿಂಗಳಿನಿಂದ ಕಾರುಗಳ ದರಗಳಲ್ಲಿ ಏರಿಕೆಯಾಗಲಿದೆ ಎಂದು ಪ್ರಖ್ಯಾತ ವಾಹನೋದ್ಯಮ ತಯಾರಿಕೆ ಕಂಪೆನಿಗಳು ಮಾಹಿತಿ ನೀಡಿವೆ.

ಏಪ್ರಿಲ್ 1ರಿಂದ ಪರಿಸರ ಸ್ನೇಹಿ ನಿಯಮಗಳ ಜಾರಿಗೆ ಸರಕಾರ ಆದೇಶಿಸಿರುವುದರಿಂದ, ಪ್ರಮುಖ ವಾಹನೋದ್ಯಮ ಸಂಸ್ಥೆಗಳಾದ, ಟಾಟಾ ಮೋಟಾರ್ಸ್,ಫಿಯೆಟ್, ಹುಂಡೈ, ಮಹೀಂದ್ರಾ ಮತ್ತು ಜನರಲ್ ಮೋಟಾರ್ಸ್ ಕಂಪೆನಿಗಳು ಕಾರುಗಳ ದರಗಳಲ್ಲಿ ಏರಿಕೆ ಮಾಡಲು ನಿರ್ಧರಿಸಿವೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಪರಿಸರ ಸ್ನೇಹಿ ನಿಯಮಗಳ ಜಾರಿಯಿಂದಾಗಿ, ಶೆವ್ರೊಲೆಟ್ ಬೀಟ್ ಮತ್ತು ಸ್ಪಾರ್ಕ್‌ ಮಾಡೆಲ್‌ಗಳನ್ನು ಹೊರತುಪಡಿಸಿ, ಉಳಿದ ಮಾಡೆಲ್‌ಗಳ ದರಗಳಲ್ಲಿ ಗರಿಷ್ಠ 6000 ರೂಪಾಯಿಗಳವರೆಗೆ ದರಗಳಲ್ಲಿ ಏರಿಕೆಯಾಗಲಿದೆ ಎಂದು ಜನರಲ್ ಮೋಟಾರ್ಸ್ ಭಾರತದ ಅಧ್ಯಕ್ಷ ಪಿ.ಬಾಲೆಂದ್ರನ್ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಅಬಕಾರಿ ತೆರಿಗೆಯನ್ನು ಹೆಚ್ಚಳಗೊಳಿಸಿದ್ದರಿಂದ.ಕಾರುಗಳ ದರಗಳಲ್ಲಿ ಏರಿಕೆಯಾಗಿತ್ತು. ಬಜೆಟ್ ನಂತರ ಇದೀಗ ಎರಡನೇ ಬಾರಿ ದರ ಏರಿಕೆಯಾಗುತ್ತಿದೆ ಎಂದು ಬಾಲೆಂದ್ರನ್ ಹೇಳಿದ್ದಾರೆ.

ಏಪ್ರಿಲ್‌ನಿಂದ ಭಾರತದ ಪ್ರಮುಖ 13 ನಗರಗಳಲ್ಲಿ ಪರಿಸರ ಸ್ನೇಹಿ ಕಠಿಣ ನಿಯಮಗಳು ಜಾರಿಗೆ ಬರಲಿವೆ.ಇತರ ನಗರಗಳಲ್ಲಿ ಯುರೋ-3 ಪರಿಸರ ಸ್ನೇಹಿ ಇಂಧನ ಬಳಕೆಯನ್ನು ಕಡ್ಡಾಯಗೊಳಿಸಿ ಮಾಷಾಲ್ಕರ್ ಸಮಿತಿ ಶಿಫಾರಸ್ಸಿನಂತೆ ಪರಿಸರ ನಿಯಂತ್ರಣಕ್ಕಾಗಿ ಸರಕಾರ ಆದೇಶ ಹೊರಡಿಸಿದೆ.

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಇಂಡಿಯಾ ಕೂಡಾ, ತನ್ನ ಎಲ್ಲಾ ಮಾಡೆಲ್‌ಗಳ ಮೇಲೆ ಏಪ್ರಿಲ್‌ನಿಂದ ಗರಿಷ್ಠ 5000 ರೂಪಾಯಿಗಳನ್ನು ಹೆಚ್ಚಿಸಲು ಯೋಜನೆಯನ್ನು ರೂಪಿಸಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ