ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಾರಾಟ ವಿಳಂಬ:ಏರಿಂಡಿಯಾಗೆ 50 ಸಾ ರೂ.ಪರಿಹಾರಕ್ಕೆ ಆದೇಶ (Air India | Compensation | Flight delay | Consumer Commission | Airline)
Bookmark and Share Feedback Print
 
ಪ್ರಯಾಣಿಕರಿಗೆ ವಿಮಾನ ಹಾರಾಟದ ವಿಳಂಬ ಸಮಯದ ಬಗ್ಗೆ ಮಾಹಿತಿ ನೀಡದ ಏರಿಂಡಿಯಾ ವಿಮಾನಯಾನ ಸಂಸ್ಥೆಗೆ ಗ್ರಾಹಕ ನ್ಯಾಯಾಲಯ, ಘಟನೆ ನಡೆದು ಐದು ವರ್ಷಗಳ ನಂತರ ತರಾಟೆಗೆ ತೆಗೆದುಕೊಂಡು, ಅರ್ಜಿದಾರರಿಗೆ 50 ಸಾವಿರ ರೂಪಾಯಿ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಸುಮಾರು ಐದು ವರ್ಷಗಳ ಹಿಂದೆ,ಏರಿಂಡಿಯಾ ವಿಮಾನ ಹಲವು ಗಂಟೆಗಳ ಕಾಲ ವಿಳಂಬವಾಗಿದ್ದು,ಪ್ರಯಾಣಿಕರಿಗೆ ವಿಳಂಬ ಹಾರಾಟದ ಬಗ್ಗೆ ಮಾಹಿತಿ ನೀಡುವಲ್ಲಿ ಕರ್ತವ್ಯಲೋಪವೆಸಗಿತ್ತು.ಸಂಸ್ಥೆಯ ಕರ್ತವ್ಯಲೋಪದ ಕುರಿತಂತೆ ಪ್ರಯಾಣಿಕರು, ದೆಹಲಿಯ ಗ್ರಾಹಕ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿ, ಏರಿಂಡಿಯಾಗೆ ಪರಿಹಾರ ನೀಡಲು ಆದೇಶಿಸುವಂತೆ ಪ್ರಕರಣವನ್ನು ದಾಖಲಿಸಿದ್ದರು.

ಅರ್ಜಿದಾರರ ವಾದವನ್ನು ಆಲಿಸಿಸ ದೆಹಲಿಯ ಜಿಲ್ಲಾ ಗ್ರಾಹಕ ನ್ಯಾಯಾಲಯ, ಅರ್ಜಿದಾರರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಏರಿಂಡಿಯಾಗೆ ಆದೇಶಿಸಿತ್ತು.

ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಏರಿಂಡಿಯಾ ಮೇಲ್ಮನವಿ ಸಲ್ಲಿಸಿತ್ತು. ಆದರೆ ಉಚ್ಚ ನ್ಯಾಯಾಲಯ ಕೂಡಾ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದರಿಂದ, ಇದೀಗ ಏರಿಂಡಿಯಾ ಅರ್ಜಿದಾರರಿಗೆ, ಪರಿಹಾರ ರೂಪದಲ್ಲಿ 50 ಸಾವಿರ ರೂಪಾಯಿ ಮತ್ತು 10 ಸಾವಿರ ರೂಪಾಯಿಗಳನ್ನು ಅರ್ಜಿದಾರರ ವೆಚ್ಚವನ್ನು ಭರಿಸಬೇಕಾಗಿ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ