ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಸ್‌ಎನ್‌ಎಲ್‌ನಿಂದ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಕೊಡುಗೆ (Broadband|new|BSNL|customers|free installation)
Bookmark and Share Feedback Print
 
ಪ್ರಸಕ್ತ ಮಾಸಾಂತ್ಯಕ್ಕೆ ಬ್ರಾಡ್‌ಬ್ಯಾಂಡ್ ಸ್ಥಿರ ದೂರವಾಣಿ ಸಂಪರ್ಕ ಪಡೆಯುವ ಗ್ರಾಹಕರಿಗೆ, 15 ದಿನಗಳ ಹೈ ಸ್ಪೀಡ್ ಇಂಟರ್ನೆಟ್‌ ಹಾಗೂ ಅಳವಡಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತಿಳಿಸಿದೆ.

ಬಿಎಸ್‌ಎನ್‌ಎಲ್ ಸಂಸ್ಥೆ, 2010ರ ಮಾರ್ಚ್ 31ರೊಳಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಬಯಸುವ ಗ್ರಾಹಕರಿಗೆ 15 ದಿನಗಳ ಅವಧಿಯ 2ಎಂಬಿಪಿಎಸ್‌ ಸ್ಪೀಡ್‌ನ ಇಂಟರ್‌ನೆಟ್ ಸೌಲಭ್ಯ, ಮ್ಯೂಸಿಕ್ ಮತ್ತು ವೀಡಿಯೋ, ಗೇಮ್ಸ್‌ಗಳ ಉಚಿತ ಸೌಲಭ್ಯ ಒದಗಿಸಲಿದ್ದು, ಇತರ ವೆಬ್‌ ಕಾನ್ಫ್‌ರೆನ್ಸಿಂಗ್ ಸೇವೆಯನ್ನು ಎರಡು ತಿಂಗಳ ಅವಧಿಗೆ ಉಚಿತವಾಗಿ ನೀಡಲಾಗುವುದು ಎಂದು ಬಿಎಸ್‌ಎನ್‌ಎಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್,ಈಗಾಗಲೇ ಇಂಟರ್‌ನೆಟ್ ಸ್ಪೀಡ್‌ನ್ನು ದ್ವಿಗುಣಗೊಳಿಸಿದೆ.ಗೃಹ ಬಳಕೆಯ ಅನಿಯಮಿತ 256ಕೆಬಿಪಿಎಸ್‌ ಇಂಟರ್‌ನೆಟ್ ಬಳಸುತ್ತಿರುವ ಬಳಕೆದಾರರಿಗೆ 2010ರ ಏಪ್ರಿಲ್ 26ರ ವರೆಗೆ ಹೆಚ್ಚುವರಿ ದರವನ್ನು ವಿಧಿಸುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ