ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಾಳೆ ಭಾರ್ತಿ, ಝೈನ್ ಒಪ್ಪಂದಕ್ಕೆ ಹಸ್ತಾಕ್ಷರ? (Bharti Airtel | Zain | Kuwait | Sign deal | Agreement)
Bookmark and Share Feedback Print
 
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್, ಕುವೈತ್ ಮೂಲದ ಟೆಲಿಕಾಂ ಸಂಸ್ಥೆ ಝೈನ್ 9 ಬಿಲಿಯನ್ ಡಾಲರ್ ಖರೀದಿ ಒಪ್ಪಂದಕ್ಕೆ ಮಂಗಳವಾರದಂದು ಸಹಿ ಹಾಕಲಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಉಭಯ ಕಂಪೆನಿಗಳ ಮಧ್ಯೆ ಅಮ್‌ಸ್ಟರ್‌ಡಮ್‌ನಲ್ಲಿ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಲಿವೆ ಎಂದು ಅನಾಮಧೇಯರಾಗಿರಲು ಬಯಸಿದ ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಮಾಧ್ಯಮಗಳ ವರದಿಗಳನ್ನು ಭಾರ್ತಿ ಏರ್‌ಟೆಲ್ ಟೆಲಿಕಾಂ ಸಂಸ್ಥೆಯ ವಕ್ತಾರರು ತಳ್ಳಿಹಾಕಿದ್ದಾರೆ.ಇದಕ್ಕಿಂತ ಮೊದಲು ಕುವೈತ್‌ನ ಮಾಧ್ಯಮಗಳು ಮಂಗಳವಾರದಂದು ಉಭಯ ಕಂಪೆನಿಗಳು ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ವರದಿ ಮಾಡಿದ್ದವು.
ಸಂಬಂಧಿತ ಮಾಹಿತಿ ಹುಡುಕಿ