ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2010ರ ವೇಳೆಗೆ ಹೊರಗುತ್ತಿಗೆ ವಹಿವಾಟಿನಲ್ಲಿ ಏರಿಕೆ (Business process outsourcing|Gartner.)
Bookmark and Share Feedback Print
 
ದೇಶದ ಹೊರಗುತ್ತಿಗೆ ವಹಿವಾಟು ಮುಂಬರುವ 2013ರ ವೇಳೆಗೆ, ಶೇ.19ರಷ್ಟು ಚೇತರಿಕೆಯಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಂಶೋಧನಾ ಮತ್ತು ಸಲಹಾ ಸಂಸ್ಥೆ ಗಾರ್ಟನರ್ ಸಮೀಕ್ಷಾ ವರದಿಯಲ್ಲಿ ಬಹಿರಂಗಪಡಿಸಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ ದರ ಹಾಗೂ ಬೇಡಿಕೆಯಲ್ಲಿ ಅಲ್ಪ ಕುಸಿತವಾಗಿದ್ದರಿಂದ, ದೇಶದ ಬಿಪಿಒ ವಹಿವಾಟು ವರ್ಷದಿಂದ ವರ್ಷಕ್ಕೆ ಶೇ.7.3ರಷ್ಟು ಏರಿಕೆ ಕಾಣುತ್ತಿದೆ ಎಂದು ಗಾರ್ಟನ್ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬರುವ 2011ರ ವೇಳೆಗೆ ದೇಶದ ಬಿಪಿಒ ವಹಿವಾಟು, 1.2 ಬಿಲಿಯನ್ ಡಾಲರ್‌‌ಗಳಿಗೆ ತಲುಪಲಿದ್ದು, 2013ರ ವೇಳೆಗೆ 1.8 ಬಿಲಿಯನ್ ಡಾಲರ್‌ಗಳಿಗೆ ತಲುಪಲಿದೆ ಎಂದು ಗಾರ್ಟನರ್ ತಿಳಿಸಿದೆ.

ಭಾರತ ಬಿಪಿಒ ಮಾರುಕಟ್ಟೆ ದೇಶದ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಸಾಲಿನಲ್ಲಿದ್ದು, ಇದೀಗ ಸಂಪೂರ್ಣ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗಾರ್ಟನರ್ ನಿರ್ದೇಶಕ ಟಿ.ಜೆ.ಸಿಂಗ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ