ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂದು ಭಾರ್ತಿ ಏರ್‌ಟೆಲ್-ಝೈನ್ ಆಫ್ರಿಕಾ ಒಪ್ಪಂದ (Zain| Bharti | Airtel | Zain | Amsterdam)
Bookmark and Share Feedback Print
 
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್, ಕುವೈತ್ ಮೂಲದ ಟೆಲಿಕಾಂ ಕಂಪೆನಿ ಝೈನ್ ಖರೀದಿಗೆ 10.7 ಬಿಲಿಯನ್ ಡಾಲರ್‌ ದರವನ್ನು ನಿಗದಿಪಡಿಸಿ ಸ್ವಾಧೀನಕ್ಕೆ ಮುಂದಾಗಿದೆ.ಇಂದು ಉಭಯ ಕಂಪೆನಿಗಳು ಅಮ್‌ಸ್ಟರ್‌ಡಮ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದು ಮೂಲಗಳು ತಿಳಿಸಿವೆ.

ಭಾರತದ ನಂಬರ್ ಒನ್ ಟೆಲಿಕಾಂ ಕಂಪೆನಿಯಾದ ಭಾರ್ತಿ ಏರ್‌ಟೆಲ್, ದಕ್ಷಿಣ ಆಫ್ರಿಕಾದ ಎರಡನೇ ಸ್ಥಾನದಲ್ಲಿರುವ ಝೈನ್ ಟೆಲಿಕಾಂ ಕಂಪೆನಿ ಖರೀದಿಸಲು ಮುಂದಾಗಿದೆ. ಝೈನ್ ಕಂಪೆನಿ ಸುಮಾರು 15 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 42 ಮಿಲಿಯನ್ ಗ್ರಾಹಕರನ್ನು ಹೊಂದಿದೆ

ಸುದ್ದಿಗಾರರು ಭಾರ್ತಿ‌ಏರ್‌ಟೆಲ್ ವಕ್ತಾರರನ್ನು ಸಂಪರ್ಕಿಸಿದಾಗ,ನಾವು ಮಾತುಕತೆಯನ್ನು ರಹಸ್ಯವಾಗಿಡುವ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ, ಪ್ರಸ್ತುತ ಹೆಚ್ಚಿಗೆ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರ್ತಿ, ಏರ್ಟೆಲ್, ಝೈನ್, ಆಫ್ರಿಕಾ