ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ದರ ಇಳಿಕೆಯಾಗುತ್ತಿದೆ:ಶೇಖರ್ (Food inflation | Vegetable | Prices | Sugar)
Bookmark and Share Feedback Print
 
ಸಕ್ಕರೆ ಹಾಗೂ ತರಕಾರಿ ದರಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆಹಾರ ಹಣದುಬ್ಬರದ ಇಳಿಕೆ ಆರಂಭವಾಗಿದೆ ಎಂದು ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಹೇಳಿದ್ದಾರೆ.

ಸಕ್ಕರೆ, ದ್ವಿದಳ ಧಾನ್ಯ ದರಗಳಲ್ಲಿ ಇಳಿಕೆಯಾಗುತ್ತಿದೆ. ಗೋಧಿ, ಖಾದ್ಯ ತೈಲ ಮತ್ತು ಭತ್ತ ದರಗಳು ಸ್ಥಿರವಾಗಿವೆ. ತರಕಾರಿ ದರಗಳಲ್ಲಿ ಇಳಿಕೆಯಾಗುತ್ತಿವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆಹಾರ ಹಣದುಬ್ಬರದ ಅಂಕಿ ಸಂಖ್ಯೆಗಳನ್ನು ಗಮನಿಸಿದಲ್ಲಿ, ಹಣದುಬ್ಬರ ಇಳಿಕೆಯಾಗುತ್ತಿದೆ ಎನ್ನುವುದು ಕಂಡುಬರುತ್ತದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.

ದೇಶದ ವಾರ್ಷಿಕ ಆಹಾರ ಹಣದುಬ್ಬರ ದರ, ಮಾರ್ಚ್ 13ಕ್ಕೆ ವಾರಂತ್ಯಗೊಂಡಂತೆ,ಶೇ.16.3ರಿಂದ ಶೇ.16.22ಕ್ಕೆ ತಲುಪಿ ಇಳಿಕೆ ಕಂಡಿತ್ತು.

ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿವಾಲಯದ ಪ್ರಕಾರ, ಆಹಾರ ವಸ್ತುಗಳ ಸಗಟು ಸೂಚ್ಯಂಕ ದರ ಶೇ.0.1ರಷ್ಟು ಏರಿಕೆ ಕಂಡಿದೆ. ಆಹಾರೇತರ ವಸ್ತುಗಳ ದರದಲ್ಲಿ ಶೇ.0.2ರಷ್ಟು ಕುಸಿತ ಕಂಡಿದೆ ಎಂದು ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ