ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಸ್ಪೆಕ್ಟ್ರಂ: ಅರ್ಹತೆ ಪಡೆದ 9 ಟೆಲಿಕಾಂ ಕಂಪೆನಿಗಳು (Telecom companies | Spectrum | Auction | Third generation | DoT)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜಿಗೆ ಅರ್ಜಿ ಸಲ್ಲಿಸಿದ ಒಂಬತ್ತು ಟೆಲಿಕಾಂ ಕಂಪೆನಿಗಳು, ಮುಂದಿನ ವಾರದಲ್ಲಿ ನಡೆಯಲಿರುವ ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಪಡೆದಿವೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

ಟೆಲಿಕಾಂ ಇಲಾಖೆಯ ಮೂಲಗಳ ಪ್ರಕಾರ, 3ಜಿ ತರಂಗಾಂತರಗಳಿಗಾಗಿ ಅರ್ಜಿ ಸಲ್ಲಿಸಿದ ಒಂಬತ್ತು ಕಂಪೆನಿಗಳು ಅರ್ಹತೆಯನ್ನು ಪಡೆದಿವೆ.ಏರ್‌ಸೆಲ್, ಭಾರ್ತಿ ಏರ್‌ಟೆಲ್, ಎಟಿಸಾಲಟ್‌ ಡಿಬಿ ಟೆಲಿಕಾಂ, ಐಡಿಯಾ ಸೆಲ್ಯೂಲರ್, ರಿಲಯನ್ಸ್ ಟೆಲಿಕಾಂ, ಎಸ್‌.ಟೆಲ್,ಟಾಟಾ ಟೆಲಿ ಸರ್ವಿಸಸ್, ವೀಡಿಯೋಕಾನ್ ಟೆಲಿ ಕಮ್ಯೂನಿಕೇಶನ್ಸ್ ಮತ್ತು ವೋಡಾಫೋನ್ ಎಸ್ಸಾರ್ ಕಂಪೆನಿಗಳು 3ಜಿ ಹರಾಜಿನಲ್ಲಿ ಪಾಲ್ಗೊಳ್ಳಲಿವೆ.

3ಜ ತರಂಗಾಂತರಗಳ ಸೇವೆಯಿಂದಾಗಿ, ಪ್ರಸ್ತುತವಿರುವ ಇಂಟರ್‌ನೆಟ್ ಸೌಲಭ್ಯಕ್ಕಿಂತ ವೇಗದ ಇಂಟರ್‌ನೆಟ್ ಸೌಲಭ್ಯವನ್ನು ಪಡೆಯಬಹುದಾಗಿದೆ.ಇಂಟರ್‌ನೆಟ್ ಟಿವಿ ವೀಡಿಯೋ, ಆಡಿಯೋ-ವೀಡಿಯೋ ಕರೆಗಳು ಮತ್ತು ಹೈ ಸ್ಪೀಡ್ ಡಟಾ ವ್ಯವಸ್ಥೆ ದೊರೆಯಲಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

ದೇಶದ ಐದು ರಾಜ್ಯಗಳಾದ ಪಂಜಾಬ್, ಬಿಹಾರ್, ಪಶ್ಚಿಮ ಬಂಗಾಳ, ಹಿಮಾಚಲ್ ಪ್ರದೇಶ ಮತ್ತು ಜಮ್ಮು ಕಾಶ್ಮಿರ ಸೇರಿದಂತೆ 22 ವೃತ್ತಗಳಲ್ಲಿ ನಾಲ್ಕು ಖಾಸಗಿ ಟೆಲಿಕಾಂ ಕಂಪೆನಿಗಳಿಗೆ 3ಜಿ ಸ್ಪೆಕ್ಟ್ರಂ ಹಂಚಿಕೆಗೆ ಅನುಮತಿ ನೀಡಲಾಗುತ್ತಿದೆ.

ಇತರ ವೃತ್ತಗಳಾದ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಿಗೆ, ಮೂರು ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

3ಜಿ ಸ್ಪೆಕ್ಟ್ರಂ ಹಂಚಿಕೆಗಾಗಿ ಕೇಂದ್ರ ಸರಕಾರ 3,500 ಕೋಟಿ ಮೀಸಲು ದರವನ್ನು ನಿಗದಿಪಡಿಸಿದೆ. 3ಜಿ ತರಂಗಾಂತರಗಳ ಹರಾಜಿನಿಂದಾಗಿ 35 ಸಾವಿರ ಕೋಟಿ ರೂಪಾಯಿಗಳ ಸಂಗ್ರಹವಾಗಲಿದೆ ಎಂದು ಟೆಲಿಕಾಂ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

3ಜಿ ತರಂಗಾಂತರಗಳ ಹರಾಜು ಏಪ್ರಿಲ್ 9 ರಂದು ನಡೆಯಲಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳ ವೇಳೆಗೆ ಕಾರ್ಯಾರಂಭ ಮಾಡಲಿವೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ