ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ಪೈಸ್‌ಜೆಟ್ ಖರೀದಿಗೆ ಮಾರನ್ 700 ಕೋಟಿ ಆಫರ್ (Kalanithi Maran | Sun TV | Aviation | SpiceJet | Star Aviation)
Bookmark and Share Feedback Print
 
ದೇಶದ ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಪೈಸ್‌ ಜೆಟ್‌ನ ಶೇ.51ರಷ್ಟು ಶೇರುಗಳನ್ನು ಖರೀದಿಸಲು, ಸನ್‌ ಟಿವಿ ಮಾಲೀಕರು ಹಾಗೂ ಮಾಧ್ಯಮ ಕ್ಷೇತ್ರದ ದಿಗ್ಗಜ ಕಲಾನಿಧಿ ಮಾರನ್ 700 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲಾನಿಧಿ ಮಾರನ್ ಮಾಧ್ಯಮ ಕ್ಷೇತ್ರದಿಂದ ವಿಮಾನಯಾನ ಕ್ಷೇತ್ರದತ್ತ ತಮ್ಮ ಚಿತ್ತವನ್ನು ಹರಡಿದ್ದು,ಪ್ರತಿ ಶೇರಿಗೆ 55 ರೂಪಾಯಿಗಳ ದರದಲ್ಲಿ ಶೇ.51ರಷ್ಟು ಶೇರಿಗೆ 700 ಕೋಟಿ ರೂಪಾಯಿ ಪಾವತಿಸಲು ಸಿದ್ಧ ಎಂದು ಅಹ್ವಾನ ನೀಡಿದ್ದಾರೆ. ಆದರೆ ಸ್ಪೈಸ್‌ಜೆಟ್ ಶೇರುದಾರರು ಪ್ರಸಕ್ತವಿರುವ ಮಾರುಕಟ್ಟೆಯ ದರವನ್ನು ನೀಡಿದಲ್ಲಿ ಮಾತ್ರ ಅನುಮತಿ ನೀಡಲು ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಶೇರುಪೇಟೆಯಲ್ಲಿ ಶೇರುದರಗಳು 57.55 ರೂಪಾಯಿಗಳಿಗೆ ಕುಸಿದಿದ್ದು, ಮಾರುಕಟ್ಟೆ ದರದ ಅನ್ವಯ ಸ್ಪೈಸ್‌ಜೆಟ್ ಮೊತ್ತ 1,388 ಕೋಟಿ ರೂಪಾಯಿಗಳಾಗಲಿವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಂಪೆನಿಯ ಶೇರುಗಳ ಮೌಲ್ಯದ ಮಧ್ಯೆ ಭಿನ್ನಾಭಿಪ್ರಾಯಗಳಿದ್ದು,ಒಂದು ವೇಳೆ ಭಿನ್ನಾಭಿಪ್ರಾಯಗಳು ಬಗೆಹರಿದಲ್ಲಿ ಹದಿನೈದು ದಿನಗಳಲ್ಲಿ ಒಪ್ಪಂದ ಪೂರ್ಣಗೊಳ್ಳಲಿದೆ. ಕೀನ್ಯಾ ಮೂಲದ ಕನಸಾಗ್ರಾ ಕುಟುಂಬ ಶೇ.13ರಷ್ಟು ಶೇರುಗಳನ್ನು ಹೊಂದುವ ಮೂಲಕ ಸಂಚಾಲನೆಯನ್ನು ನಿರ್ವಹಿಸುತ್ತಿದೆ ಎಂದು ಸ್ಪೈಸ್ ಜೆಟ್ ನಿರ್ದೇಶಕ ಶೇ.5ರಷ್ಟು ಶೇರುಗಳನ್ನು ಹೊಂದಿದ್ದಾರೆ.

ವಿಮಾನಯಾನ ಕ್ಷೇತ್ರವನ್ನು ಪ್ರವೇಶಿಸಲು ತವಕದಲ್ಲಿರುವ ಮಾರನ್, ದಕ್ಷಿಣ ಭಾರತದಲ್ಲಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿರುವ ಸ್ಟಾರ್-ಏವಿಯೇಶನ್‌ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ