ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೋಹಾ, ಜೆಡ್ಡಾದಲ್ಲಿ ಶೀಘ್ರ ಶಾಖೆ ಆರಂಭ:ಎಸ್‌ಬಿಐ (State Bank of India | Doha | Jeddah | Foreign lenders | Gulf | Operations)
Bookmark and Share Feedback Print
 
ಗಲ್ಫ್ ರಾಷ್ಟ್ರಗಳಲ್ಲಿ ಸ್ಥಾನವನ್ನು ಭಧ್ರಪಡಿಸಿಕೊಳ್ಳಲು ಯತ್ನಿಸುತ್ತಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ದೋಹಾ ಮತ್ತು ಜಿಡ್ಡಾದಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲು ನಿರ್ಧರಿಸಿದೆ ಬ್ಯಾಂಕ್ ಮೂಲಗಳು ತಿಳಿಸಿವೆ.

ದೋಹಾದಲ್ಲಿ ಶಾಖೆಯನ್ನು ಆರಂಭಿಸಲು ಕತಾರ್ ಫೈನಾನ್ಶಿಯಲ್ ಸೆಂಟರ್ ರೆಗ್ಯೂಲೆಟರಿ ಅಥಾರಿಟಿ ಕಚೇರಿಯ ಅನುಮತಿ ಪಡೆಯಲು ಸಂಪರ್ಕಿಸಿದೆ. ಮುಂದಿನ ವಾರದಲ್ಲಿ ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಎಸ್‌ಬಿಐ ಬ್ಯಾಂಕ್ ಮೂಲಗಳು ತಿಳಿಸಿವೆ.

ದೋಹಾದಲ್ಲಿ ಆರಂಭವಾಗಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಸ್ಥಳೀಯ ನಿವಾಸಿಗಳ ಚಿಲ್ಲರೆ ವಹಿವಾಟು ಹೊರತುಪಡಿಸಿ ಇತರ ಕಾರ್ಯಾಚರಣೆಗಳನ್ನು ಆರಂಭಿಸಲಿದೆ. ಚಿಲ್ಲರೆ ವಹಿವಾಟು ಆರಂಭಿಸಲು ಕುವೈತ್ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ, ಜಿಡ್ಡಾದಲ್ಲಿ ಬ್ಯಾಂಕ್ ಶಾಖೆ ಆರಂಭಿಸಲು ಸರಕಾರದ ಅನುಮತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಗ್ರಾಹಕರಿಗೆ ಸಂಪೂರ್ಣ ಸೇವೆಯನ್ನು ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಿಡ್ಡಾದಲ್ಲಿ ಸೌದಿ ಅರೇಬಿಯಾದ ಹಣಕಾಸು ವಹಿವಾಟು ನಿಯಂತ್ರಕ ಮಂಡಳಿಯಿಂದ ಪರವಾನಿಗಿ ದೊರೆತಿದೆ. ಶಾಖೆ ಆರಂಭಕ್ಕೆ ಮುನ್ನ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಎಸ್‌ಬಿಐ ಮೂಲಗಳು ತಿಳಿಸಿವೆ.

ಇತ್ತಿಚೀಗೆ, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಕರೆನ್ಸಿ ಯುವಾನ್‌ನಲ್ಲಿ ಸೇವೆಯನ್ನು ನೀಡಲು ಚೀನಾದ ಅಧಿಕಾರಿಗಳಿಂದ ಅನುಮತಿ ಪಡೆದಿದ್ದು, ಕಮ್ಯೂನಿಷ್ಟ ದೇಶದಲ್ಲಿ ಅಂತಹ ಅಧಿಕಾರ ಪಡೆದ ಎಸ್‌ಬಿಐ ಭಾರತದ ಮೊದಲ ಬ್ಯಾಂಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ