ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂದು ಮಧ್ಯರಾತ್ರಿಯಿಂದ ಪೆಟ್ರೋಲ್ ಡೀಸೆಲ್ ದರ ಏರಿಕೆ (0il prices|Rise|Petrol, Diesel rates|Rs 0.50/litre)
Bookmark and Share Feedback Print
 
PTI
ನಾಳೆಯಿಂದ ಪರಿಸರ ಸ್ನೇಹಿ ಯುರೋ-4 ಇಂಧನ ಸರಬರಾಜು ಮಾಡಲು ಸರಕಾರ ನಿರ್ಧರಿಸಿದ್ದರಿಂದ, ಇಂದು ಮಧ್ಯರಾತ್ರಿಯಿಂದ ದೇಶದ 13 ನಗರಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ 0.50 ಪೈಸೆ ಹೆಚ್ಚಳವಾಗಲಿದೆ ಎಂದು ಇಂಧನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರಸ್ತುತ 47.93ರೂಪಾಯಿಗಳಾಗಿದ್ದು, 0.50 ಪೈಸೆ ಹೆಚ್ಚಳವಾಗಲಿದೆ. ಮತ್ತು ಡೀಸೆಲ್ ದರ ಪ್ರಸ್ತುತ 38.10 ರೂಪಾಯಿಗಳಾಗಿದ್ದು, 0.26 ಪೈಸೆ ಹೆಚ್ಚಳವಾಗಲಿದೆ.

ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದ್ರಾಬಾದ್, ಬೆಂಗಳೂರು, ಲಕ್ನೋ, ಕಾನ್ಪುರ್, ಆಗ್ರಾ, ಸೂರತ್, ಅಹ್ಮದಾಬಾದ್ ಪುಣೆ ಮತ್ತು ಸೋಲಾಪುರ್ ನಗರಗಳು ಪರಿಸರ ಸ್ನೇಹಿ ಯುರೋ-3 ಇಂಧನದಿಂದ ನಾಳೆ ಯುರೋ-4 ದರ್ಜೆಯ ಇಂಧನದತ್ತ ತೆರಳುತ್ತಿವೆ. ಸ್ಥಳೀಯ ತೆರಿಗೆಗಳಿಂದಾಗಿ ನಗರದಿಂದ ನಗರಕ್ಕೆ ಇಂಧನ ದರಗಳಲ್ಲಿ ಬದಲಾವಣೆಗಳಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ 13 ಮಹಾನಗರಗಳನ್ನು ಹೊರತುಪಡಿಸಿ, ಇತರ ನಗರಗಳು ಗೋವಾದಿಂದ ಆರಂಭಗೊಂಡಂತೆ ಯುರೋ-2ದಿಂದ ಯುರೋ-3 ದರ್ಜೆಯ ಇಂಧನ ಸರಬರಾಜು ಮಾಡಲಾಗುತ್ತಿದೆ.

ಯುರೋ-3 ಇಂಧನ ದರ ಪ್ರತಿ ಲೀಟರ್‌ಗೆ 0.26 ಪೈಸೆ ಹೆಚ್ಚಳವಾಗಲಿದೆ.ಅದೇ ದರ್ಜೆಯ ಡೀಸೆಲ್‌ಗೆ 0.21 ಪೈಸೆ ಹೆಚ್ಚಳವಾಗಲಿದೆ.ನಗರದಿಂದ ನಗರಕ್ಕೆ ದರಗಳಲ್ಲಿ ಭಿನ್ನತೆಯಿರಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತಂತೆ ಪೆಟ್ರೋಲಿಯಂ ಸಚಿವಾಲಯ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಮಂಗಳವಾರದಂದು ಅನುಮತಿ ದೊರೆತಿದೆ ಎನ್ನವಾಗಿದೆ.

ಪರಿಸರ ಸ್ನೇಹಿ ಇಂಧನ ಉತ್ಪಾದನೆಗಾಗಿ, ತೈಲ ಕಂಪೆನಿಗಳು 40,000 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರಿಂದ,ತೈಲ ಕಂಪೆನಿಗಳ ವೆಚ್ಚವನ್ನು ಭರಿಸಲು ಇಂಧನ ದರಗಳಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಇಂಧನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ