ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವರ್ಷಾಂತ್ಯಕ್ಕೆ 3ಜಿ ತರಂಗಾಂತರ ಸೇವೆ ಆರಂಭ:ಭಾರ್ತಿ (Bharti Airtel | Telecom service | Network | 3G spectrum | BWA spectrum)
Bookmark and Share Feedback Print
 
PTI
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಭಾರ್ತಿ ಏರ್‌ಟೆಲ್, ವರ್ಷಾಂತ್ಯಕ್ಕೆ 3ಜಿ ಸೇವೆಯನ್ನು ಆರಂಭಿಸಲಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

3ಜಿ ಸೇವೆಯನ್ನು ಆರಂಭಿಸಲು ಬಿಲ್ಲಿಂಗ್, ಅಪ್ಲಿಕೇಶನ್ ಮತ್ತು ಕಂಟೆಂಟ್ ನೆಟ್‌ವರ್ಕ್ ಸಿದ್ಧವಾಗಿದೆ.ಬಿಡ್ ಪಡೆದ ಸುಮಾರು 6-8 ತಿಂಗಳುಗಳ ಅವಧಿಯಲ್ಲಿ ಸೇವೆಯನ್ನು ಆರಂಭಿಸಲಾಗುವುದು ಎಂದು ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಕಪೂರ್ ತಿಳಿಸಿದ್ದಾರೆ.

2010ರ ಏಪ್ರಿಲ್ 9 ರಂದು 3ಜಿ ತರಂಗಾಂತರಗಳ ಹರಾಜಿಗೆ ಕೇಂದ್ರ ಸರಕಾರ ನಿರ್ಧರಿಸಿದೆ. ಆದರೆ ಟೆಲಿಕಾಂ ಇಲಾಖೆಯ ಪ್ರಕಾರ, ಬಿಡ್‌ದಾರರು, 2010ರ ಸೆಪ್ಟೆಂಬರ್ 1 ರ ನಂತರ ಮಾತ್ರ 3ಜಿ ಸೇವೆಗಳನ್ನು ಆರಂಭಿಸಬಹುದಾಗಿದೆ.ಭಾರ್ತಿ ಏರ್‌ಟೆಲ್ ಅಕ್ಟೋಬರ್ ತಿಂಗಳ ನಂತರ 3ಜಿ ಸೇವೆಯನ್ನು ಆರಂಭಿಸಬಹುದಾಗಿದೆ.

ಭಾರ್ತಿ ಏರ್‌ಟೆಲ್ ಕಂಪೆನಿ, 3ಜಿ ಹಾಗೂ ಬಿಡಬ್ಲೂಎ ತರಂಗಾಂತರಗಳಿಗಾಗಿ ಬಿಡ್ ಸಲ್ಲಿಸಿದೆ, ಭಾರ್ತಿ ಸೇರಿದಂತೆ ಇತರ ಎಂಟು ಕಂಪೆನಿಗಳು ಕೂಡಾ ಬಿಡ್ ಸಲ್ಲಿಸಿವೆ ಎಂದು ಟೆಲಿಕಾಂ ಇಲಾಖೆಯ ಮೂಲಗಳು ತಿಳಿಸಿವೆ.

ವೋಢಾಫೋನ್, ಆರ್‌ಕಾಂ, ಟಾಟಾ, ಐಡಿಯಾ ಸೆಲ್ಯೂಲರ್ ಕಂಪೆನಿಗಳು ಕೂಡಾ 3ಜಿ ಮತ್ತು ಬಿಡಬ್ಲೂಎ ತರಂಗಾಂತರಗಳಿಗಾಗಿ ಬಿಡ್ ಸಲ್ಲಿಸಿದೆ.

ಕೇಂದ್ರ ಸರಕಾರ 3ಜಿ ತರಂಗಾಂತರಗಳಿಗಾಗಿ 3,500 ಕೋಟಿ ರೂಪಾಯಿಗಳ ಮೀಸಲು ದರವನ್ನು ಘೋಷಿಸಿದೆ.ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಸೇವೆಗಾಗಿ 1,750 ಕೋಟಿ ರೂಪಾಯಿಗಳ ಮೀಸಲು ದರ ನಿಗದಿಪಡಿಸಿದೆ.

ಏತನ್ಮಧ್ಯೆ, 3ಜಿ ತರಂಗಾಂತರಗಳನ್ನು ಪಡೆಯಲು ಪ್ರಮುಖ ಒಂಬತ್ತು ಖಾಸಗಿ ಟೆಲಿಕಾಂ ಕಂಪೆನಿಗಳು ಬಿಡ್ ಸಲ್ಲಿಸಿರುವುದರಿಂದ ಬಿಡ್ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಟೆಲಿಕಾಂ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ