ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಚಿನ್ನದ ಅಮುದು ವಹಿವಾಟಿನಲ್ಲಿ ಚೇತರಿಕೆ (Gold imports | Bullion Association | Prices| Indian rupee)
Bookmark and Share Feedback Print
 
PTI
ಭಾರತದ ಚಿನ್ನದ ಅಮುದು ವಹಿವಾಟು ಮಾರ್ಚ್ ತಿಂಗಳಾಂತ್ಯಕ್ಕೆ 26ರಿಂದ 28 ಟನ್‌ಗಳಿಗೆ ಏರಿಕೆಯಾಗಿದೆ.ಕಳೆದ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ 4.8 ಟನ್ ಚಿನ್ನವನ್ನು ಅಮುದು ಮಾಡಿಕೊಳ್ಳಲಾಗಿತ್ತು ಎಂದು ಮುಂಬೈ ಚಿನಿವಾರಪೇಟೆಯ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಹುಂಡಿಯಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಇಳಿಕೆ ಹಾಗೂ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 19 ತಿಂಗಳ ಗರಿಷ್ಠ ಚೇತರಿಕೆಯಿಂದಾಗಿ, ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ.ಫೆಬ್ರವರಿ ತಿಂಗಳ ಅವಧಿಯಲ್ಲಿ 28 ಚಿನ್ನವನ್ನು ಅಮುದು ಮಾಡಿಕೊಳ್ಳಲಾಗಿತ್ತು ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.

ಭಾರತದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯದ ಚೇತರಿಕೆಯಿಂದಾಗಿ, ಚಿನ್ನದ ದರದಲ್ಲಿ ಶೇ.3ರಷ್ಟು ಕುಸಿತವಾಗಿ ಪ್ರತಿ 10ಗ್ರಾಂ ಚಿನ್ನದ ದರ 16,450 ರೂಪಾಯಿಗಳಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಿನ್ನದ ದರದಲ್ಲಿ ಕುಸಿತವಾಗದಿದ್ದಲ್ಲಿ, ಏಪ್ರಿಲ್ ತಿಂಗಳ ಅವಧಿಯ ಚಿನ್ನದ ಅಮುದಿನಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ತಾವು ಭಾವಿಸಿಲ್ಲ ಎಂದು ಹುಂಡಿಯಾ ತಿಳಿಸಿದ್ದಾರೆ.

ಭಾರತ, ಸಾಗರೋತ್ತರ ಮಾರುಕಟ್ಟೆಗಳಿಂದ ವಾರ್ಷಿಕವಾಗಿ 700 ರಿಂದ 800 ಟನ್ ಚಿನ್ನವನ್ನು ಅಮುದು ಮಾಡಿಕೊಳ್ಳುತ್ತಿದೆ.

ಏತನ್ಮಧ್ಯೆ, 2009ರಲ್ಲಿ ಚಿನ್ನದ ದಾಖಲೆಯ ದರ ಏರಿಕೆಯಿಂದಾಗಿ, ಚಿನ್ನದ ಅಮುದು ವಹಿವಾಟು 459 ಟನ್‌ಗಳಿಗೆ ಇಳಿಕೆ ಕಂಡಿತ್ತು ಎಂದು ವರ್ಲ್ಡ್‌ ಗೋಲ್ಡ್ ಕೌನ್ಸಿಲ್ ಮೂಲಗಳು ತಿಳಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದ್ದರಿಂದ,ಡಿಸೆಂಬರ್ ಮತ್ತು ಜನೆವರಿ ತಿಂಗಳ ಅವಧಿಯಲ್ಲಿ ಅಮುದು ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡುಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ