ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಪಿಎಲ್‌ನಿಂದ 150 ಕೋಟಿ ರೂ. ನೇರ ತೆರಿಗೆ ಸಂಗ್ರಹ (IPL 3 | Direct tax | BCCI | Franchises | Lalit Modi | Income)
Bookmark and Share Feedback Print
 
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯಲ್ಲಿ ,ನೇರ ತೆರಿಗೆ ಸಂಗ್ರಹ 150 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರದ ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.

ಐಪಿಎಲ್ ಪಂದ್ಯಾವಳಿಯಿಂದಾಗಿ 150 ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹವನ್ನು ನಿರೀಕ್ಷಿಸಲಾಗಿದೆ. ಈಗಾಗಲೇ ಪಂದ್ಯಗಳು ಆರಂಭವಾದ ಹದಿನೈದು ದಿನಗಳಲ್ಲಿ 110 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ 90-100 ಕೋಟಿ ರೂಪಾಯಿಗಳು ಹಾಗೂ ಎಂಟು ಫ್ರೆಂಚೈಸಿಗಳಿಂದ 50-60 ಕೋಟಿ ರೂಪಾಯಿಗಳ ನೇರ ತೆರಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಸಮಯದಲ್ಲಿ ಫ್ರೆಂಚೈಸಿಗಳಿಂದ 50 ಕೋಟಿ ರೂಪಾಯಿಗಳ ನೇರ ತೆರಿಗೆಯನ್ನು ಸಂಗ್ರಹಿಸಲಾಗಿದ್ದು, ಬಿಸಿಸಿಐಯಿಂದ 60 ಕೋಟಿ ರೂಪಾಯಿಗಳ ನೇರ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2008ರಲ್ಲಿ ಭಾರತದಲ್ಲಿ ಆಯೋಜಿಸಲಾದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ, 90 ಕೋಟಿ ರೂಪಾಯಿಗಳ ನೇರ ತೆರಿಗೆಯನ್ನು ಸಂಗ್ರಹಿಸಲಾಗಿತ್ತು.ಐಪಿಎಲ್ ಎರಡನೇ ಆವೃತ್ತಿಯ ಪಂದ್ಯ ಭಧ್ರತಾ ಕಾರಣಗಳಿಂದಾಗಿ, ದಕ್ಷಿಣ ಆಫ್ರಿಕಾಗೆ ವರ್ಗಾಯಿಸಲಾಗಿತ್ತು.

ಒಟ್ಟಾರೆ, ಇಂಡಿಯನ್ ಪ್ರೀಮಿಯರ್ ಲೀಗ್‌ ಪ್ರಸಕ್ತ ಪಂದ್ಯಾವಳಿ, ಒಂದು ಬಿಲಿಯನ್ ಡಾಲರ್ ವಹಿವಾಟು ನಡೆಸಲಿದೆ ಎಂದು ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ