ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದ್ವಿಚಕ್ರ ವಾಹನ ಮಾರುಕಟ್ಟೆಗೆ: ದರ 6 ಲಕ್ಷದಿಂದ 35ಲಕ್ಷ ರೂ. (Harley bookings India|Harley Davidson India)
Bookmark and Share Feedback Print
 
ಅಮೆರಿಕ ಮೂಲದ ಅತ್ಯಾಧುನಿಕ ದ್ವಿಚಕ್ರ ವಾಹನ ತಯಾರಿಕೆ ಸಂಸ್ಥೆ ಹಾರ್ಲೆ-ಡೇವಿಡ್ಸನ್,ಏಪ್ರಿಲ್‌ನಲ್ಲಿ ಮುಂಗಡ ಬುಕ್ಕಿಂಗ್ ಆರಂಭಿಸಲಿದ್ದು, ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟಕ್ಕಾಗಿ ಮೊದಲ ಹಂತದಲ್ಲಿ ಐದು ಮಂದಿ ಡೀಲರ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

ಆರಂಭದ ವರ್ಷದಲ್ಲಿ 12 ಮಾಡೆಲ್‌ಗಳನ್ನು ಬಿಡುಗಡೆ ಮಾಡಲಿದೆ. ಏಪ್ರಿಲ್ 20 ರಿಂದ ಮುಂಗಡ ಬುಕ್ಕಿಂಗ್ ಆರಂಭವಾಗಲಿದ್ದು, ಜೂನ್‌ನಿಂದ ದ್ವಿಚಕ್ರ ವಾಹನಗಳನ್ನು ಗ್ರಾಹಕರಿಗೆ ವಿತರಿಸಲಾಗುವುದು. ದ್ವಿಚಕ್ರ ವಾಹನ ದರ 6.95 ಲಕ್ಷ ರೂಪಾಯಿಗಳಿಂದ 34.95ಲಕ್ಷ ರೂಪಾಯಿ(ಶೋರೂಂ ಹೊರತುಪಡಿಸಿ)ನಿಗದಿಪಡಿಸಲಾಗಿದೆ.

ದೆಹಲಿ, ಮುಂಬೈ, ಬೆಂಗಳೂರು, ಚಂಡೀಗಢ್ ಮತ್ತು ಹೈದ್ರಾಬಾದ್‌ ನಗರಗಳಲ್ಲಿ ಡೀಲರ್‌ಶಿಪ್ ನೀಡಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಹಾರ್ಲೆ-ಡೇವಿಡ್ಸನ್‌ ಕಂಪೆನಿಗೆ ಆಯ್ಕೆಯಾದ ಡೀಲರ್‌ಗಳಿಗೆ ಹೃದಯ ಪೂರ್ವಕ ಸ್ವಾಗತ.ದೇಶದಲ್ಲಿ ಪ್ರಬಲ ನೆಟ್‌ವರ್ಕ್ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಗ್ರಾಹಕರಿಗೆ ಜಾಗತಿಕ ಮಟ್ಟದ ದ್ವಿಚಕ್ರವಾಹನಗಳ ಮಾಲೀಕತ್ವದ ಅನುಭವ ದೊರೆಯಲಿದೆ.ಎಂದು ಹಾರ್ಲೆ-ಡೇವಿಡ್ಸನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಪ್ರಕಾಶ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ