ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರ್‌ಟೆಲ್‌ನಿಂದ 1.3ಬಿನ್. ಡಾಲರ್ ಗುತ್ತಿಗೆ: ಎರಿಕ್ಸನ್ (Bharti|Airtel|Ericsson|Network| Expansion)
Bookmark and Share Feedback Print
 
ನೆಟ್‌ವರ್ಕ್ ವಿಸ್ತರಣೆಗಾಗಿ ಭಾರತ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್ ಸಂಸ್ಥೆಯಿಂದ 1.3 ಬಿಲಿಯನ್ ಡಾಲರ್ ಗುತ್ತಿಗೆಯನ್ನು ಪಡೆದುಕೊಳ್ಳಲಾಗಿದೆ ಎಂದು ಸ್ವೀಡನ್ ಮೂಲದ ಸೋನಿ ಎರಿಕ್ಸನ್‌ ಹೇಳಿಕೆ ನೀಡಿದೆ.

ಭಾರ್ತಿ ಏರ್‌ಟೆಲ್ ಕಂಪೆನಿಯ ಜಿಎಸ್‌ಎಂ ನೆಟ್‌ವರ್ಕ್‌ನ 15 ವೃತ್ತಗಳಲ್ಲಿ ವಿಸ್ತರಿಸುವುದರೊಂದಿಗೆ ಮೇಲ್ದರ್ಜೆಗೇರಿಸಲಿದೆ.ಭಾರ್ತಿ ಸಂಸ್ಥೆ ಈಗಾಗಲೇ 3ಜಿ ಸೇವೆಗಳಿಗಾಗಿ ಬಿಡ್ ಸಲ್ಲಿಸಿದ್ದು, ಕಡಿಮೆ ಸಮಯದಲ್ಲಿ ಗರಿಷ್ಠ ವೇಗದಲ್ಲಿ ನೆಟ್‌ವರ್ಕ್ ವಿಸ್ತರಣೆಯಾಗಲಿದೆ ಎಂದು ಎರಿಕ್ಸನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಸೋನಿ ಎರಿಕ್ಸನ್ ಮತ್ತು ಭಾರ್ತಿ ಏರ್‌ಟೆಲ್ ಮಧ್ಯೆ ಸೋಮವಾರದಂದು ಒಪ್ಪಂದ ಏರ್ಪಟ್ಟಿದೆ.

ಎರಿಕ್ಸನ್ ಕಂಪೆನಿಗೆ ಚೀನಾದ ಮೊಬೈಲ್ ಕಂಪೆನಿ 1 ಬಿಲಿಯನ್ ಡಾಲರ್ ಹಾಗೂ ಚೀನಾದ ಯುನಿಕಾಂ ಟೆಲಿಕಾಂ ಕಂಪೆನಿ 800 ಮಿಲಿಯನ್ ಡಾಲರ್ ಗುತ್ತಿಗೆಯನ್ನು ನೀಡಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ