ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕ ವರ್ಷದಲ್ಲಿ 10 ಲಕ್ಷ ಕಾರುಗಳ ಮಾರಾಟ:ಮಾರುತಿ (Maruti Suzuki | Sales | Carmakers | Gurgaon plant)
Bookmark and Share Feedback Print
 
ಕಳೆದ ಆರ್ಥಿಕ ವರ್ಷದಲ್ಲಿ 10 ಲಕ್ಷ ಕಾರುಗಳನ್ನು ಮಾರಾಟ ಮಾಡಲಾಗಿದ್ದು, ಫ್ರಸಕ್ತ ಆರ್ಥಿಕ ವರ್ಷದಲ್ಲಿ ಕೂಡಾ 10 ಲಕ್ಷ ಕಾರುಗಳ ಮಾರಾಟದ ಗುರಿಯನ್ನು ಹೊಂದಲಾಗಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ ತಿಳಿಸಿದೆ.

ಮಾರುತಿ ಸುಝುಕಿ ಕಂಪೆನಿಯಾಗಿ ಸ್ಥಾಪನೆಯಾದ 26 ವರ್ಷಗಳ ನಂತರ, 10 ಲಕ್ಷ ಕಾರುಗಳ ಮಾರಾಟದ ಗುರಿಯನ್ನು ತಲುಪಿರುವುದು ಕೇವಲ ಮಾರುತಿ ಕಂಪೆನಿ ಸಾಧನೆಯಲ್ಲ. ಭಾರತೀಯ ವಾಹನೋದ್ಯಮ ಕ್ಷೇತ್ರದ ಸಾಧನೆಯಾಗಿದೆ ಎಂದು ಮಾರುತಿ ಸುಝುಕಿ ಇಂಡಿಯಾದ ಕಾರ್ಯಾಕಾರಿ ನಿರ್ದೇಶಕ ಮಯಾಂಕ್ ಪರಿಕ್ ತಿಳಿಸಿದ್ದಾರೆ.

ಮಾರುತಿ ಸುಝುಕಿ ಕಂಪೆನಿ ದೇಶಾದ್ಯಂತ 750 ಸೇವಾ ಕೇಂದ್ರಗಳ ನೆರವಿನಿಂದ ಜಾಗತಿಕ ಮಟ್ಟದ ಗುರಿಯನ್ನು ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಾರ್ಷಿಕವಾಗಿ 10 ಕಾರುಗಳನ್ನು ಮಾರಾಟ ಮಾಡುವ ಕಂಪೆನಿಗಳಾದ ಟೋಯೊಟಾ, ಜನರಲ್ ಮೋಟಾರ್ಸ್, ವೊಕ್ಸ್‌ವಾಗನ್, ಫೊರ್ಡ್, ಹೊಂಡಾ, ರೆನೌಲ್ಟ್, ಹುಂಡೆ,ಸುಝುಕಿ ಆಂಡ್ ನಿಸಾನ್ ಸಾಲಿಗೆ ಮಾರುತಿ ಸುಝುಕಿ ಸೇರ್ಪಡೆಗೊಂಡಿದೆ.

1983ರ ಡಿಸೆಂಬರ್ 14 ರಂದು ಗುರ್ಗಾಂವ್ ಘಟಕದಿಂದ ಪ್ರಥಮವಾಗಿ, ಮಾರುತಿ 800 ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ