ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.35ಕ್ಕೆ ತಲುಪಿದ ಅಹಾರ ಹಣದುಬ್ಬರ ದರ (Food inflation|16.35 per cent)
Bookmark and Share Feedback Print
 
ದ್ವಿದಳ ಧಾನ್ಯ ಹಾಗೂ ಹಾಲಿನ ದರಗಳ ಏರಿಕೆಯಿಂದಾಗಿ, ಮಾರ್ಚ್ 20ಕ್ಕೆ ವಾರಂತ್ಯಗೊಂಡಂತೆ ಅಹಾರ ಹಣದುಬ್ಬರ ದರ ಶೇ.16.35ಕ್ಕೆ ಏರಿಕೆ ಕಂಡಿದೆ.

ಕಳೆದ ಮಾರ್ಚ್ 13ಕ್ಕೆ ವಾರಂತ್ಯಗೊಂಡಂತೆ ಅಹಾರ ಹಣದುಬ್ಬರ ದರ, ನಾಲ್ಕು ತಿಂಗಳ ಇಳಿಕೆ ಕಂಡು ಶೇ.16.22ಕ್ಕೆ ಕುಸಿತವಾಗಿತ್ತು.

ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.31.55ರಷ್ಟು ಹಾಗೂ ಹಾಲಿನ ದರದಲ್ಲಿ ಶೇ.18.74ರಷ್ಟು ಹೆಚ್ಚಳವಾಗಿರುವುದರಿಂದ,ಅಹಾರ ಹಣದುಬ್ಬರ ಏರಿಕೆ ಕಂಡಿದೆ.

ದ್ವಿದಳ ಧಾನ್ಯ ಮತ್ತು ಹಾಲು ದರದಲ್ಲಿ ಶೇ.3ರಷ್ಟು ಎರಿಕೆ ಕಂಡಿರುವುದು ಹಾಗೂ ಮಸಾಲೆ ಮತ್ತು ಸಾಂಬಾರ ಪದಾರ್ಥಗಳ ದರ ಹೆಚ್ಚಳದಿಂದಾಗಿ, ವಾರದ ಆಧಾರದಲ್ಲಿ ಅಹಾರ ವಸ್ತುಗಳ ಸೂಚ್ಯಂಕ ದರ ಶೇ.0.6ರಷ್ಟು ಏರಿಕೆ ಕಂಡಿದೆ.

ಒಟ್ಟಾರೆ ಹಣದುಬ್ಬರ ದರ ಜನೆವರಿ ತಿಂಗಳ ಅವಧಿಯಲ್ಲಿ ಶೇ.8.56 ರಿಂದ ಫೆಬ್ರವರಿ ತಿಂಗಳಲ್ಲಿ ಶೇ.9.89ಕ್ಕೆ ಏರಿಕೆ ಕಂಡಿದೆ.ಪೆಟ್ರೋಲ್ ಮತ್ತು ಡೀಸೆಲ್‌ ಉತ್ಪನ್ನಗಳ ಮೇಲೆ ಅಬಕಾರಿ ತೆರಿಗೆಯಲ್ಲಿ ಹೆಚ್ಚಳ, ಇಂಧನ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ