ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸುಝುಕಿ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.76ರಷ್ಟು ಹೆಚ್ಚಳ (Suzuki Motorcycle | Sales | GS150R | Japan)
Bookmark and Share Feedback Print
 
ನೂತನ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಸುಝುಕಿ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.76.13ರಷ್ಟು ಹೆಚ್ಚಳವಾಗಿ, 21,752ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

2009ರ ಮಾರ್ಚ್ ತಿಂದಳ ಅವಧಿಯಲ್ಲಿ, 12,350 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರ ತೃಪ್ತಿಗಾಗಿ ಉತ್ತಮ ಗುಣಮಟ್ಟದ ಮಾಡೆಲ್‌ಗಳ ವಾಹನಗಳನ್ನು ವಿತರಿಸಿದ್ದು, ಮುಂಬರುವ ದಿನಗಳಲ್ಲಿ ಕೂಡಾ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆಯಾಗುವ ವಿಶ್ವಾಸವಿದೆ ಎಂದು ಸುಝುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪೆನಿ ಉಪಾಧ್ಯಕ್ಷ(ಮಾರಾಟ ಮತ್ತು ಮಾರುಕಟ್ಟೆ)ಅತುಲ್ ಗುಪ್ತಾ ಹೇಳಿದ್ದಾರೆ.

ಜಪಾನ್‌ನ ವಾಹನೋದ್ಯಮ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದೈತ್ಯ ಕಂಪೆನಿ, ಸುಝಕಿ ಮೋಟಾರ್ ಕಾರ್ಪೋರೇಶನ್ ಲಿಮಿಟೆಡ್‌ನ ಆಧೀನ ಸಂಸ್ಥೆಯಾದ ಭಾರತದ ಸುಝುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪೆನಿ ನೂತನವಾದ ಜಿಎಸ್‌150ಆರ್‌ ಮಾಡೆಲ್ ದ್ವಿಚಕ್ರ ವಾಹನ ಭಾರಿ ಭೇಡಿಕೆಯನ್ನು ತಂದಿತ್ತು.
ಸಂಬಂಧಿತ ಮಾಹಿತಿ ಹುಡುಕಿ