ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿ ಕಾರುಗಳ ಮಾರಾಟದಲ್ಲಿ ಶೇ11ರಷ್ಟು ಹೆಚ್ಚಳ (Maruti Suzuki | Car maker | Exports | India)
Bookmark and Share Feedback Print
 
ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಇಂಡಿಯಾ, ರಫ್ತು ವಹಿವಾಟಿನಲ್ಲಿ ಹೆಚ್ಚಳವಾಗಿದ್ದರಿಂದ, ಮಾರ್ಚ್ ತಿಂಗಳ ಅವಧಿಯ ಮಾರಾಟದಲ್ಲಿ ಶೇ.11.04ರಷ್ಟು ಹೆಚ್ಚಳವಾಗಿ,95,123 ವಾಹನಗಳನ್ನು ಮಾರಾಟ ಮಾಡಲಾಗಿದೆ.

ಕಳೆದ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ 85,669 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಮಾರುತಿ ಸುಝುಕಿ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

2009-10ರ ಆರ್ಥಿಕ ಸಾಲಿನ ವಾರ್ಷಿಕ ವಹಿವಾಟಿನ ಮಾರಾಟದಲ್ಲಿ ಶೇ.28.55ರಷ್ಟು ಏರಿಕೆಯಾಗಿ, 10,18,365 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷದ ಅವಧಿಯಲ್ಲಿ 7,92,167 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಕಾರು ತಯಾರಿಕೆ ಕಂಪೆನಿ, ಮೊದಲ ಬಾರಿಗೆ ವಾರ್ಷಿಕವಾಗಿ 10 ಲಕ್ಷ ಕಾರುಗಳ ಮಾರಾಟದ ಗುರಿಯನ್ನು ದಾಖಲಿಸಿದೆ

ಮಾರ್ಚ್ ತಿಂಗಳ ಅವಧಿಯ ಮಾರುತಿ ಕಾರುಗಳ ರಫ್ತು ವಹಿವಾಟಿನಲ್ಲಿ ಶೇ.31.99ರಷ್ಟು ಹೆಚ್ಚಳವಾಗಿದ್ದು,15,593 ವಾಹನಗಳನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ 11,814 ವಾಹನಗಳನ್ನು ಮಾರಾಟ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ