ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಚ್‌ಇಎಲ್‌ಗೆ 4,287 ಕೋಟಿ ರೂ.ನಿವ್ವಳ ಲಾಭ (BHEL | Net profit | BSE | Stock Exchange | Financial year)
Bookmark and Share Feedback Print
 
ಸರಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್(ಬಿಎಚ್‌ಇಎಲ್) ಪ್ರಸಕ್ತ ಆರ್ಥಿಕ ವರ್ಷದ ನಿವ್ವಳ ಲಾಭದಲ್ಲಿ ಶೇ.36.61ರಷ್ಟು ಏರಿಕೆಯಾಗಿ 4,287 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

2008-09ರ ಆರ್ಥಿಕ ಸಾಲಿನ ಅವಧಿಯಲ್ಲಿ, ಕಂಪೆನಿಯ ನಿವ್ವಳ ಲಾಭ, 3,138 ಕೋಟಿ ರೂಪಾಯಿಗಳಾಗಿತ್ತು ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ವಿದ್ಯುತ್ ಉಪಕರಣಗಳ ತಯಾರಿಕೆ ಸಂಸ್ಥೆಯಾದ ಬಿಎಚ್‌ಇಎಲ್ ಕಂಪೆನಿ, 2010ರ ಆರ್ಥಿಕ ವರ್ಷದಲ್ಲಿ ಒಟ್ಟು ವಹಿವಾಟು 34,050 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 28,033 ಕೋಟಿ ರೂಪಾಯಿಗಳ ವಹಿವಾಟು ನಡೆಸಲಾಗಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಸಿಸಿದ ವರದಿಯಲ್ಲಿ ಕಂಪೆನಿ ಬಹಿರಂಗಪಡಿಸಿದೆ.

ಬಿಎಚ್‌ಇಎಲ್ ಶೇರುಗಳು ಶೇರುಪೇಟೆಯ ವಹಿವಾಟಿನಲ್ಲಿ ಶೇ.0.02ರಷ್ಟು ಕುಸಿತಗೊಂಡು, ತಲಾ ಶೇರು ದರ 2,385 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ