ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರ್ತಿಯ ಝೈನ್‌ಗೆ ಮನೋಜ್ ಕೊಹ್ಲಿ ಮುಖ್ಯಸ್ಥ: ಮಿತ್ತಲ್ (Bharti Airtel | Manoj Kohli | Sunil Bharti Mittal | Mobile Telecommunications)
Bookmark and Share Feedback Print
 
ಕುವೈತ್ ಮೂಲದ ದಕ್ಷಿಣ ಆಫ್ರಿಕಾದಲ್ಲಿರುವ ಝೈನ್ ಟೆಲಿಕಾಂ ಕಂಪೆನಿಯನ್ನು 10.7 ಬಿಲಿಯನ್ ಡಾಲರ್ ಪಾವತಿಸಿ ಖರೀದಿಸಿದ ಭಾರ್ತಿ ಏರ್‌ಟೆಲ್, ಆಫ್ರಿಕಾದಲ್ಲಿನ ವಹಿವಾಟು ಮೇಲ್ವಿಚಾರಣೆಗೆ ಮನೋಜ್ ಕೊಹ್ಲಿಯವರನ್ನು ನೇಮಕ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಂಪೆನಿಯ ಸಾಗರೋತ್ತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಮನೋಜ್ ಕೊಹ್ಲಿಯವರನ್ನು ದಕ್ಷಿಣ ಆಫ್ರಿಕಾದ ವ್ಯವಹಾರಗಳ ಮುಖ್ಯಸ್ಥರನ್ನಾಗಿ ಭಾರ್ತಿ ಏರ್‌ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ನೇಮಕ ಮಾಡಿದ್ದಾರೆ.

ಮನೋಜ್ ಕೊಹ್ಲಿಯವರ ನೇಮಕ ಖಚಿತವಾಗಿದೆ ಆದರೆ ಅವರ ವರ್ಗಾವಣೆ ಸ್ಥಳದ ಬಗ್ಗೆ ಖಚಿತ ಮಾಹಿತಿಯಿಲ್ಲ ಎಂದು ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕುವೈತ್ ಮೂಲದ ಕಂಪೆನಿ ಖರೀದಿಯೊಂದಿಗೆ ಶೇರುಪೇಟೆಯಲ್ಲಿ ಭಾರ್ತಿ ಶೇರುದರಗಳಲ್ಲಿ ಶೇ.3ರಷ್ಟು ಹೆಚ್ಚಳವಾಗಿದ್ದು, ಪ್ರತಿ ಶೇರಿಗೆ 4.15 ರೂಪಾಯಿಗಳಷ್ಟು ಹೆಚ್ಚಳವಾಗಿ 315.10 ರೂಪಾಯಿಗಳಿಗೆ ತಲುಪಿದೆ.

ಕುವೈತ್ ಮೂಲದ ಝೈನ್ ಟೆಲಿಕಾಂ ಕಂಪೆನಿಯನ್ನು 9 ಬಿಲಿಯನ್ ಡಾಲರ್ 1ಗದು ಹಾಗೂ ಕಂಪೆನಿಯ 1.7 ಬಿಲಿಯನ್ ಡಾಲರ್‌ ಸಾಲದ ಪಾವತಿಯ ಹೊಣೆಹೊತ್ತ ಭಾರ್ತಿ ಏರ್‌ಟೆಲ್, ಒಟ್ಟು 10.7 ಬಿಲಿಯನ್ ಡಾಲರ್ ಹಣ ಪಾವತಿಸಿ ಖರೀದಿಸಿದಂತಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ