ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದೇಶಿ ಕರೆನ್ಸಿ ಠೇವಣಿ ಬಡ್ಡಿ ದರದಲ್ಲಿ ಹೆಚ್ಚಳ:ಎಸ್‌ಬಿಐ (SBI | Deposit rates | Foreign currency | Interest rates)
Bookmark and Share Feedback Print
 
ಅನಿವಾಸಿ ಭಾರತೀಯರ ವಿದೇಶಿ ಕರೆನ್ಸಿ ಠೇವಣಿ ಹಾಗೂ ಅನಿವಾಸಿ ಭಾರತೀಯರ ಠೇವಣಇಗಳ ಮೇಲೆ ಬಡ್ಡಿ ದರ ಹೆಚ್ಚಳಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.

ಎಫ್‌ಸಿಎನ್‌ಆರ್‌(ಬಿ) ಡಾಲರ್‌ಗಳ ಠೇವಣಿ, ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಶೇ.1.92ರಷ್ಟು ಬಡ್ಡಿ ದರದಲ್ಲಿ ಹೆಚ್ಚಳಗೊಳಿಸಿದೆ. ಏತನ್ಮಧ್ಯೆ, ಎರಡು ವರ್ಷಗಳಿಂದ ಮೂರು ವರ್ಷಕ್ಕಿಂತ ಕಡಿಮೆ ಅವದಿಯ ಠೇವಣಿಗಳ ಬಡ್ಡಿ ದರವನ್ನು ಶೇ.2.24ರಷ್ಟು ಏರಿಕೆ ಮಾಡಿದೆ.

ಅದರಂತೆ, 3-4, 4-5 ಮತ್ತು 5 ವರ್ಷಗಳ ಠೇವಣಿಗಳ ಬಡ್ಡಿ ದರಗಳನ್ನು ಕ್ರಮವಾಗಿ ಶೇ.2.84, ಶೇ.3.34 ಮತ್ತು ಶೇ.3.75ರಷ್ಟು ಬಡ್ಡಿ ದರದಲ್ಲಿ ಹೆಚ್ಚಳಗೊಳಿಸಲಾಗಿದೆ ಎಂದು ಎಸ್‌ಬಿಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಯುರೋ ಠೇವಣಿಗಳಲ್ಲಿ 1-2 ವರ್ಷಗಳ ಅವಧಿಗೆ ಮತ್ತು 2-3 ವರ್ಷಗಳ ಅವಧಿಯ ಠೇವಣಿಯ ಬಡ್ಡಿ ದರವನ್ನು, ಕ್ರಮವಾಗಿ ಶೇ.2.19 ಮತ್ತು ಶೇ.2.49ರಷ್ಟು ಹೆಚ್ಚಳಗೊಳಿಸಿದೆ.

ಅನಿವಾಸಿ ಭಾರತೀಯರ ಠೇವಣಿ, 1-2 ವರ್ಷಗಳು,2-3 ವರ್ಷಗಳು ಮತ್ತು 3-5 ವರ್ಷಗಳು ಅವಧಿಯ ಠೇವಣಿ ಬಡ್ಡಿ ದರವನ್ನು ಕ್ರಮವಾಗಿ ಶೇ.2.67, ಶೇ.2.99 ಮತ್ತು ಶೇ.3.59 ರಷ್ಟು ಹೆಚ್ಚಳಗೊಳಿಸಲಾಗಿದೆ ಎಂದು ಎಸ್‌ಬಿಐ ಬ್ಯಾಂಕ್‌‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ