ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಿಡಿಪಿ ದರ ಶೇ.7.5ಕ್ಕೆ ತಲುಪಲಿದೆ: ಆನಂದ್ ಶರ್ಮಾ (India | economy | exports | CII | Strong recovery)
Bookmark and Share Feedback Print
 
ದೇಶದ ರಫ್ತು ವಹಿವಾಟಿನಲ್ಲಿ ಸಂಪೂರ್ಣ ಚೇತರಿಕೆ ಕಂಡಿದ್ದರಿಂದ, ಆರ್ಥಿಕ ವೃದ್ದಿ ದರ ಶೇ.7.5ಕ್ಕೆ ತಲುಪು ಸಾಧ್ಯತೆಗಳಿವೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ದೇಶದ ರಫ್ತು ವಹಿವಾಟಿನಲ್ಲಿ ಚೇತರಿಕೆ ಕಂಡಿದೆ.ಜಿಡಿಪಿ ದರ ಶೇ.72.2ರ ಬದಲು ಶೇ.7.5ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸಿಐಐ ಆಯೋಜಿಸಿದ ಸಮಾರಂಭದಲ್ಲಿ ಸಚಿವ ಶರ್ಮಾ ತಿಳಿಸಿದ್ದಾರೆ.

ಪ್ರಸಕ್ತ ಆರ್ಥಿಕ ಸಾಲಿನ ಮುಕ್ತಾಯಕ್ಕೆ ಆರ್ಥಿಕ ವೃದ್ದಿ ದರ ಶೇ.8.5ಕ್ಕೆ ತಲುಪಲಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಈ ಹಿಂದೆ ಹೇಳಿಕೆ ನೀಡಿದ್ದರು.

ಅಕ್ಟೋಬರ್ 2008 ರಿಂದ ಕುಸಿತ ಕಂಡಿದ್ದ ಭಾರತದ ರಫ್ತು ವಹಿವಾಟು, ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.34.8ರಷ್ಟು ಏರಿಕೆ ಕಂಡು, 16.09 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಕಳೆದ ಆರ್ಥಿಕ ವರ್ಷದ ಆರಂಭಿಕ ಏಳು ತಿಂಗಳಲ್ಲಿ ಒಟ್ಟಾರೆ ರಫ್ತು ವಹಿವಾಟಿನಲ್ಲಿ ಶೇ.11ರಷ್ಟು ಕುಸಿತ ಕಂಡು 172 ಬಿಲಿಯನ್ ಡಾಲರ್‌ಗಳಿಂದ 153 ಬಿಲಿಯನ್ ಡಾಲರ್‌ಗಳಿಗೆ ಇಳಿಕೆ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ