ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ವಾಹನಗಳ ಮಾರಾಟದಲ್ಲಿ ಶೇ38.01ರಷ್ಟು ಹೆಚ್ಚಳ (Tata Motors | March | sales up | Indica)
Bookmark and Share Feedback Print
 
ದೇಶದ ವಾಹನೋದ್ಯಮ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್,ಮಾರ್ಚ್ ತಿಂಗಳ ಅವಧಿಯ ಮಾರಾಟದಲ್ಲಿ ಶೇ.38.01ರಷ್ಟು ಏರಿಕೆ ಕಂಡು 75,151 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಮಾರ್ಚ್ ತಿಂಗಳ ಅವಧಿಯಲ್ಲಿ 54,452 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಟಾಟಾ ಮೋಟಾರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

2009-10ರ ಆರ್ಥಿಕ ಸಾಲಿನ ಒಟ್ಟು ವಾಹನಗಳ ಮಾರಾಟದಲ್ಲಿ ಶೇ.28.91ರಷ್ಟು ಏರಿಕೆಯಾಗಿ,6,42.686 ವಾಹನಗಳನ್ನು ಮಾರಾಟ ಮಾಡಲಾಗಿದೆ.2008-09ರ ಆರ್ಥಿಕ ಸಾಲಿನಲ್ಲಿ 4,98,547 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ ತಿಂಗಳ ಅವಧಿಯ ರಫ್ತು ವಹಿವಾಟಿನಲ್ಲಿ ದ್ವಿಗುಣವಾಗಿ 4,105 ವಾಹನಗಳನ್ನು ರಫ್ತು ಮಾಡಲಾಗಿದೆ.ಕಳೆದ ವರ್ಷದ ಅವಧಿಯಲ್ಲಿ 1,799 ವಾಹನಗಳನ್ನು ಮಾರಾಟ ಮಾಡಲಾಗಿದೆ.

ಟಾಟಾ ಮೋಟಾರ್ಸ್‌ನ ಇಂಡಿಕಾ ಮಾಡೆಲ್‌‌ನ 11,618 ವಾಹನಗಳನ್ನು ಮಾರಾಟ ಮಾಡಲಾಗಿದ್ದು,ಇತರ ಮಾಡೆಲ್‌ಗಳಿಗಿಂತ ಮಾರಾಟದಲ್ಲಿ ಮುಂಚೂಣಿಯಲ್ಲಿದೆ.ಪ್ರಸಕ್ತ ಮಾರ್ಚ್ ತಿಂಗಳ ಅವಧಿಯಲ್ಲಿ 4,710 ನ್ಯಾನೋ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ