ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಬಿಐನಿಂದ ಗೃಹಸಾಲ ಯೋಜನೆ ವಿಸ್ತರಣೆ (SBI | Teaser rates | Extend | Home loan | Scheme | Borrowers)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ವಿಶೇಷ ಗೃಹಸಾಲ ಯೋಜನೆಯಡಿಯಲ್ಲಿ, ಶೇ.8ರ ಬಡ್ಡಿ ದರವನ್ನು ಮುಂದಿನ ತಿಂಗಳವರೆಗೆ ವಿಸ್ತರಿಸಿದೆ. ಆದರೆ ನಿಯಮಗಳಲ್ಲಿ ಕೆಲ ಬದಲಾವಣೆ ತಂದಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಷ್ಕ್ರತ ಯೋಜನೆಯಂತೆ ಗೃಹ ಸಾಲದ ಮೇಲಿನ ಶೇ.8ರಷ್ಟು ಬಡ್ಡಿ ದರವನ್ನು, ಆರಂಭಿಕ ವರ್ಷದಲ್ಲಿ ನಿಗದಿಪಡಿಸಲಾಗಿದೆ. ಎರಡನೇ ವರ್ಷ ಹಾಗೂ ಮೂರನೇ ವರ್ಷದ ಅವಧಿಗೆ ಶೇ.9ರಷ್ಟು ಬಡ್ಡಿದರವನ್ನು ವಿಧಿಸಲಾಗುವುದು.

2008-09ರ ಆರ್ಥಿಕ ಸಾಲಿನಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ದರವನ್ನು, ಆರಂಭಿಕ ವರ್ಷದಲ್ಲಿ ಶೇ.8ರಷ್ಟನ್ನು ವಿಧಿಸಲಾಗಿತ್ತು. ನಂತರದ ವರ್ಷದಲ್ಲಿ ಶೇ.8.5ರಷ್ಟು ಬಡ್ಡಿ ದರವನ್ನು ಸ್ಥಿರಗೊಳಿಸಲಾಗಿತ್ತು.

ಬ್ಯಾಂಕಿಂಗ್ ಮೂಲಗಳ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಶೇ.2.75ರಿಂದ ಶೇ.1.75ಕ್ಕೆ ಇಳಿಕೆ ಘೋಷಿಸುವ ಸಾಧ್ಯತೆಗಳಿವೆ.ಇದರಿಂದಾಗಿ 100 ಬೇಸಿಸ್ ಪಾಯಿಂಟ್‌ಗಳನ್ನು ಕಡಿತ ಮಾಡಿದಂತಾಗುತ್ತದೆ ಎಂದು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ