ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್‌ಬಿಐನಿಂದ ರೆಪೋ ದರಗಳಲ್ಲಿ ಹೆಚ್ಚಳ:ಗೋಲ್ಡ್‌ಮ್ಯಾನ್ (Reserve Bank | Goldman Sachs | CRR | Inflation | Borrowing rates)
Bookmark and Share Feedback Print
 
ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳ ಪರಿಷ್ಕರಣೆಯಲ್ಲಿ, 25ಬೇಸಿಸ್ ಪಾಯಿಂಟ್‌‌ಗಳಷ್ಟು ಹೆಚ್ಚಳಗೊಳಿಸುವ ಸಾಧ್ಯತೆಗಳಿವೆ ಎಂದು ಏಷ್ಯಾದ ಅಧ್ಯಯನ ಸಂಸ್ಥೆ ಗೋಲ್ಡ್‌ಮ್ಯಾನ್ ಸಾಚೆಸ್ ಹೇಳಿಕೆ ನೀಡಿದೆ.

ಮಾರುಕಟ್ಟೆಯಲ್ಲಿ ನಗದು ಹಣದ ಹರಿವು ನಿಯಂತ್ರಣ ಹಾಗೂ ದರ ಏರಿಕೆಯನ್ನು ನಿಯಂತ್ರಿಸಲು, ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ 300 ಬೇಸಿಸ್ ಪಾಯಿಂಟ್‌ಗಳನ್ನು ಆರ್‌ಬಿಐ ಹೆಚ್ಚಿಸಲಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್, ಮಾರ್ಚ್ 19 ಅನಿರೀಕ್ಷಿತವಾಗಿ 25 ರಷ್ಟು ಬೇಸಿಸ್ ಪಾಯಿಂಟ್‌ಗಳ ರೆಪೋ ದರಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು.ಪ್ರಸಕ್ತ ತಿಂಗಳ 20 ರಂದು ನಡೆಯಲಿರುವ ಪರಿಷ್ಕರಣ ಸಭೆಯಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಗೋಲ್ಡ್‌ಮ್ಯಾನ್ ಅಧ್ಯಯನ ಸಂಸ್ಥೆ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಕೊನೆಯ ತ್ರೈಮಾಸಿಕ ಪರಿಷ್ಕರಣ ಸಂದರ್ಭದಲ್ಲಿ, ಬ್ಯಾಂಕ್‌ಗಳು ಆರ್‌ಬಿಐನಲ್ಲಿಡುವ ಕ್ಯಾಷ್ ರಿಸರ್ವ್ ರೇಶಿಯೋ ದರಗಳಲ್ಲಿ ಕೂಡಾ 75ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಳಗೊಳಿಸಿ7.75ಕ್ಕೆ ನಿಗದಿಪಡಿಸಿತ್ತು.

ಹಾಲಿನ ದರ ಏರಿಕೆ ಹಾಗೂ ದ್ವಿದಳ ಧಾನ್ಯಗಳ ದರ ಏರಿಕೆಯಿಂದಾಗಿ, ಮಾರ್ಚ್ 20ಕ್ಕೆ ವಾರಂತ್ಯಗೊಂಡಂತೆ ಅಹಾರ ಹಣದುಬ್ಬರ ದರ ಶೇ.16.35ಕ್ಕೆ ಏರಿಕೆ ಕಂಡಿದೆ.

ಅಹಾರ ಮತ್ತು ಅಹಾರರೇತರ ವಸ್ತುಗಳ ದರ ಏರಿಕೆಯಿಂದಾಗಿ ಒಟ್ಟಾರೆ, ಅಹಾರ ಹಣದುಬ್ಬರ ದರ ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.9.89ಕ್ಕೆ ತಲುಪಿದೆ. ಆದರೆ ಶೀಘ್ರದಲ್ಲಿ ಎರಡಂಕಿಗೆ ತಲುಪುವ ಸಾಧ್ಯತೆಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ