ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಖಾಸಗಿ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಹೆಚ್ಚಳವಾಗಲಿದೆ:ಮುಖರ್ಜಿ (Pranab Mukherjee | Budget | Economy | SIDBI | Private investment)
Bookmark and Share Feedback Print
 
ಪ್ರಸಕ್ತ ಬಜೆಟ್‌‍‌ನಲ್ಲಿ ಘೋಷಿಸಿದ ಕೆಲ ವಿನಾಯತಿಗಳಿಂದಾಗಿ, ದೇಶದ ಖಾಸಗಿ ಹೂಡಿಕೆಯಲ್ಲಿ ಹೆಚ್ಚಳವಾಗಿ ಆರ್ಥಿಕ ವೃದ್ಧಿ ದರ ಶೇ.9ಕ್ಕೆ ತಲುಪುವ ವಿಶ್ವಾಸವಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

2010-11ರ ಅವಧಿಯ ಬಜೆಟ್‌ನಲ್ಲಿ ತೋರಲಾದ ರಿಯಾಯತಿಗಳಿಂದಾಗಿ ಖಾಸಗಿ ಕ್ಷೇತ್ರದ ಹೂಡಿಕೆಯಲ್ಲಿ ಹೆಚ್ಚಳವಾಗಿ,ಜಿಡಿಪಿ ದರ ಶೇ.9ಕ್ಕೆ ತಲುಪುವ ಬಗ್ಗೆ ಆಶಾವಾದಿಯಾಗಿದ್ದೇನೆ ಎಂದು ಎಸ್‌ಐಡಿಬಿಐ ಆಯೋಜಿಸಿದ ಸಮಾರಂಭದಲ್ಲಿ ಸಚಿವ ಮುಖರ್ಜಿ ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಬೇಡಿಕೆಯಲ್ಲಿ ಚೇತರಿಕೆ ಕಂಡಿದ್ದರಿಂದ, 2009-10ರ ಆರ್ಥಿಕ ಸಾಲಿನಲ್ಲಿ ಆರ್ಥಿಕ ವೃದ್ಧಿ ದರ ನಿರೀಕ್ಷೆಗೆ ತಕ್ಕಂತೆ ಶೇ.7.2ಕ್ಕೆ ತಲುಪಿದೆ ಎಂದು ಮುಖರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ (2010-11) ಆರ್ಥಿಕ ವೃದ್ಧಿ ದರ, ಶೇ.8.25 ರಿಂದ ಶೇ.8.75ಕ್ಕೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ಮುಖರ್ಜಿ ಭವಿಷ್ಯ ನುಡಿದಿದ್ದಾರೆ.

ನಿನ್ನೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮಾತನಾಡಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.9ಕ್ಕೆ ತಲುಪುವ ವಿಶ್ವಾಸವಿದ್ದು, ನಂತರದ ವರ್ಷಗಳಲ್ಲಿ ಜಿಡಿಪಿ ದರ ಮತ್ತಷ್ಟು ಉತ್ತಮವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ