ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2009ರಲ್ಲಿ 101.54 ಮಿನ್‌ ಮೊಬೈಲ್‌‌ಗಳ ಮಾರಾಟ (Handset | Market | Mobile handset | Nokia | IDC)
Bookmark and Share Feedback Print
 
ಕಳೆದ ಆರ್ಥಿಕ ವರ್ಷದಲ್ಲಿ 101.54 ಮಿಲಿಯನ್ ಮೊಬೈಲ್‌ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಅಧ್ಯಯನ ಸಂಸ್ಥೆ ಐಡಿಸಿ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಫಿನ್ನಿಶ್ ಹ್ಯಾಂಡ್‌ಸೆಟ್ ತಯಾರಿಕೆ ಸಂಸ್ಥೆ ನೋಕಿಯಾ ಮೊಬೈಲ್ ಮಾರಾಟದಲ್ಲಿ ಶೇ.54.1ರಷ್ಟು ಪಾಲನ್ನು ಹೊಂದಿದ್ದು,ಸ್ಯಾಮ್‌ಸುಂಗ್ ಕಂಪೆನಿ ಶೇ.9.7ರಷ್ಟು ಹಾಗೂ ಎಲ್‌ಜಿ ಕಂಪೆನಿ ಶೇ.6.4ರಷ್ಟು ಪಾಲನ್ನು ಹೊಂದಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

2009ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ, ಮೊಬೈಲ್ ಹ್ಯಾಂಡ್‌ಸೆಟ್‌ಗಳ ಮಾರಾಟದಲ್ಲಿ ಶೇ.17.5ರಷ್ಟು ಏರಿಕೆಯಾಗಿತ್ತು.ಜನೆವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಶೇ.0.9 ರಷ್ಟು ಮಾತ್ರ ಮೊಬೈಲ್ ಮಾರಾಟದಲ್ಲಿ ಕುಸಿತ ಕಂಡಿದೆ.

ಅಧ್ಯಯನ ಸಂಸ್ಥೆ ಐಡಿಸಿಯ ಮುಖ್ಯ ತಜ್ಞರಾದ ನವೀನ್ ಮಿಶ್ರಾ ಮಾತನಾಡಿ, ಮುಂಬರುವ ದಿನಗಳಲ್ಲಿ ದೇಶದ ಮೊಬೈಲ್ ಮಾರುಕಟ್ಟೆ ಭಾರಿ ಚೇತರಿಕೆ ಕಾಣುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ