ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಸಾಧ್ಯತೆ:ಪ್ರಣಬ್ ಮುಖರ್ಜಿ (Direct tax collection | Budget | Pranab Mukherjee | SIDBI | Tax collection)
Bookmark and Share Feedback Print
 
2010ರ ಆರ್ಥಿಕ ವರ್ಷದಲ್ಲಿ ಬಜೆಟ್‌ನಲ್ಲಿ ಮಂಡಿಸಲಾದ ಅಂದಾಜು ಗುರಿಗಿಂತ ಹೆಚ್ಚಳವಾಗಿ 3.70 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಪ್ರಕಟಿಸಲಾದ ಅಂದಾಜು ನೇರ ತೆರಿಗೆ ಸಂಗ್ರಹದ ಗುರಿಗಿಂತ ಹೆಚ್ಚಳ ಸಂಗ್ರಹವಾದಲ್ಲಿ ಉತ್ತಮ ಚೇತರಿಕೆ ಕಾಣುವ ಸಾಧ್ಯತೆಗಳಿವೆ ಎಂದು ಸಚಿವ ಮುಖರ್ಜಿ ತಿಳಿಸಿದ್ದಾರೆ.

ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೋರೇಟ್ ತೆರಿಗೆ ವೈಯಕ್ತಿಕ ಆದಾಯ ಹಾಗೂ ಆಸ್ತಿ ತೆರಿಗೆಯನ್ನು ಒಳಗೊಂಡಿರುತ್ತದೆ. ಆದರೆ ಆರ್ಥಿಕ ವರ್ಷಾಂತ್ಯಕ್ಕೆ ನೇರ ತೆರಿಗೆ ಸಂಗ್ರಹ ವಸೂಲಾತಿಯಲ್ಲಿ ಕೊರತೆ ಎದುರಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹ 2.78 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಬಜೆಟ್‌ನಲ್ಲಿ ತೋರಿಸಲಾದ ಅಂದಾಜಿಗಿಂತ 1ಲಕ್ಷ ಕೋಟಿ ರೂಪಾಯಿ ಕೊರತೆ ಕಂಡುಬಂದಿತ್ತು.

ಕಳೆದ ಫೆಬ್ರವರಿ ತಿಂಗಳ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹದಲ್ಲಿ ಶೇ.27.54ರಷ್ಟು ಏರಿಕೆಯಾಗಿ, 14,675 ಕೋಟಿ ರೂಪಾಯಿಗಳಿಗೆ ತಲುಪಿತ್ತು. 2009ರ ಫೆಬ್ರವರಿ ತಿಂಗಳ ಅವಧಿಯಲ್ಲಿ 11,506 ಕೋಟಿ ರೂಪಾಯಿಗಳಷ್ಟು ನೇರ ತೆರಿಗೆ ಸಂಗ್ರಹಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ