ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿ ಕಾರುಗಳ ದರಗಳಲ್ಲಿ 10 ಸಾವಿರವರೆಗೆ ಹೆಚ್ಚಳ (Maruti Suzuki | Emission norm | Ritz | A-Star | prices)
Bookmark and Share Feedback Print
 
ಪರಿಸರ ಸ್ನೇಹಿ ಯುರೋ-4 ಇಂಧನವನ್ನು ಪರಿಚಯಿಸಿದ್ದರಿಂದ, ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದ್ದರಿಂದ, ಕೆಲ ಮಾಡೆಲ್‌ಗಳ ದರಗಳಲ್ಲಿ 10,000 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಮಾರುತಿ ಸುಝುಕಿ ಕಂಪೆನಿಯ ಮೂಲಗಳು ತಿಳಿಸಿವೆ.

ಕಾರು ತಯಾರಿಕೆ ವೆಚ್ಚ ಹಾಗೂ ಯುರೋ-4 ಇಂಧನ ಪರಿಚಯಿಸಿದ್ದರಿಂದ, ಕೆಲ ಮಾಡೆಲ್‌ಗಳ ದರಗಳಲ್ಲಿ 10,000 ರೂಪಾಯಿ ಹೆಚ್ಚಳಗೊಳಿಸಲು ನಿರ್ಧರಿಸಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ಸುಝುಕಿ ಕಂಪೆನಿಯ ಕಾರು ಮಾಡೆಲ್ ರಿಟ್ಜ್ ಮತ್ತು ಎ-ಸ್ಟಾರ್ ಕಾರುಗಳು 1,000ರೂ ,ಎಸ್ಟಿಲ್ಲೊ ಮಾಡೆಲ್ ಕಾರು 2.500 ರೂ ಮತ್ತು ಸ್ವಿಫ್ಟ್ ಕಾರಿನ ದರವನ್ನು 3,750 ರೂಪಾಯಿಗಳನ್ನು ಹೆಚ್ಚಿಸಲಾಗಿದೆ.

ಸೆಡಾನ್ ಡಿಸೈರ್ ಕಾರಿನ ದರದಲ್ಲಿ 7,000 ರೂಪಾಯಿ ಮತ್ತು ಮಧ್ಯಮ ಗಾತ್ರದ ಎಸ್‌ಎಕ್ಸ್‌4 ಕಾರಿನ ದರ 9,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಬಹು ಉಪಯೋಗಿ ವ್ಯಾನ್ ಎಕೊ ಕಾರಿನ ದರದಲ್ಲಿ 10,000 ರೂಪಾಯಿಗಳನ್ನು ಹೆಚ್ಚಳಗೊಳಿಸಲಾಗಿದೆ. ಪರಿಸರ ಸ್ನೇಹಿ ಯುರೋ-3 ಇಂಧನವನ್ನು ಬಳಸುವ ಮಾರುತಿ 800 ಮತ್ತು ಒಮ್ನಿ ಮಾಡೆಲ್ ಕಾರು ದರದಲ್ಲಿ ಕ್ರಮವಾಗಿ 3,000 ಮತ್ತು ಜಿಪ್ಸಿ ಮಾಡೆಲ್‌ ಕಾರಿಗೆ 10,000 ರೂಪಾಯಿಗಳನ್ನು ಹೆಚ್ಚಿಸಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ