ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏ.5ರಂದು ಅಹಾರ ಭಧ್ರತೆ ಮಸೂದೆ ಸಭೆ (Food security bill | Legislation | EGoM | Rice | Wheat)
Bookmark and Share Feedback Print
 
ಅಹಾರ ಭದ್ರತಾ ಮಸೂದೆಯನ್ನು ಮಂಡಿಸಿದ ಒಂದು ತಿಂಗಳು ನಂತರ, ಏಪ್ರಿಲ್ 5 ರಂದು ಸಭೆ ಸೇರಲಿದ್ದು,ಸಂಸತ್ತಿನಲ್ಲಿ ಮಂಡಿಸಲಾದ ಕೆಲ ಬದಲಾವಣೆಗಳ ಬಗ್ಗೆ ಚರ್ಚಿಸಲಿದೆ ಎಂದು ಗ್ರೂಪ್ ಆಫ್ ಮಿನಿಸ್ಟರ್ಸ್‌ ಮೂಲಗಳು ತಿಳಿಸಿವೆ.

ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ತಿಂಗಳು 25 ಕೆಜಿ ಭತ್ತ ಅಥವಾ ಗೋಧಿಯನ್ನು ಸರಬರಾಜು ಮಾಡುವಂತೆ ಮಸೂದೆಯಲ್ಲಿ ಕೆಲ ಬದಲಾವಣೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಸಂಪುಟ ಸಚಿವರುಗಳ ಸಭೆ ಅಹಾರ ಭದ್ರತೆ ಮಸೂದೆಗೆ ಅಂಗೀಕಾರ ನೀಡಿದ್ದು, ಸಂಪುಟದ ಮುಂದೆ ತರುವ ಸಾಧ್ಯತೆಗಳಿವೆ. ಮಾಸಿಕ ಪ್ರತಿ ಕೆಜಿಗೆ 3 ರೂಪಾಯಿ ದರದಂತೆ 25 ಕೆಜಿ ಭತ್ತ ಅಥವಾ ಗೋಧಿಯನ್ನು ವಿತರಿಸಲು ಉದ್ದೇಶಿಸಲಾಗಿದೆ.

ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಅಹಾರ ಭಧ್ರತಾ ಮಸೂದೆಯಲ್ಲಿ ಕೆಲ ಬದಲಾವಣೆಗಳನ್ನು ತರುವಂತೆ ಸ್ಪಷ್ಟವಾಗಿ ನಿರ್ದೇಶಿಸಿದ್ದಾರೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ