ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಉಕ್ಕು ದರ : ಪ್ರತಿ ಟನ್‌ಗೆ 2,500 ರೂಪಾಯಿ ಹೆಚ್ಚಳ (Steel | SAIL | JSW | Price | Input cost | Tata Steel)
Bookmark and Share Feedback Print
 
ದೇಶದ ಪ್ರಮುಖ ಉಕ್ಕು ಉತ್ಪಾದಕ ಕಂಪೆನಿಗಳಾದ ಸೇಲ್,ಜೆಎಸ್‌ಡಬ್ಲೂ ಮತ್ತು ಎಸ್ಸಾರ್, ಉತ್ಪಾದಕ ವೆಚ್ಚದಲ್ಲಿ ಹೆಚ್ಚಳವಾಗಿದ್ದರಿಂದ ಪ್ರತಿ ಟನ್ ಉಕ್ಕು ದರದಲ್ಲಿ 2,500 ರೂಪಾಯಿಗಳಷ್ಟು ದರ ಏರಿಕೆ ಘೋಷಿಸಿವೆ.

ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ಪ್ರತಿ ಟನ್ ಉಕ್ಕು ದರದಲ್ಲಿ 2,000-2500 ರೂಪಾಯಿಗಳವರೆಗೆ ದರ ಹೆಚ್ಚಳ ಮಾಡಲಾಗಿದೆ ಎಂದು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಮುಖ್ಯಸ್ಥ ಎಸ್‌.ಕೆ.ರೊಂಗ್ಟಾ ತಿಳಿಸಿದ್ದಾರೆ.

ಖಾಸಗಿ ಕ್ಷೇತ್ರದ ಉಕ್ಕು ಉತ್ಪಾದಕ ಕಂಪೆನಿಗಳಾದ ಜೆಎಸ್‌ಡಬ್ಲೂ ಸ್ಟೀಲ್ ಮತ್ತು ಎಸ್ಸಾರ್ ಸ್ಟೀಲ್ ಕಂಪೆನಿಗಳ ದರ ಏರಿಕೆಯನ್ನು ಖಚಿತಪಡಿಸಿವೆ.

ವಿಶ್ವದ ಆರನೇ ಸ್ಥಾನದಲ್ಲಿರುವ ಬೃಹತ್ ಉಕ್ಕು ತಯಾರಿಕೆ ಕಂಪೆನಿಯಾದ ಟಾಟಾ ಸ್ಟೀಲ್,ದರ ಏರಿಕೆ ಕುರಿತಂತೆ ಪ್ರಸ್ತುತ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದೆ.

ಜೆಎಸ್‌ಡಬ್ಲೂ ಸ್ಟೀಲ್ ಕಂಪೆನಿಯ ಮಾರಾಟ ಹಾಗೂ ಮಾರುಕಟ್ಟೆಯ ನಿರ್ದೇಶಕ ಜಯಂತ್ ಆಚಾರ್ಯ ಮಾತನಾಡಿ, ಉಕ್ಕು ದರಗಳಲ್ಲಿ ಶೇ.5- 7ರಷ್ಟು ಹೆಚ್ಚಳಗೊಳಿಸಲಾಗಿದ್ದು,ಏಪ್ರಿಲ್ ಮದ್ಯಭಾಗದಲ್ಲಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಎಸ್ಸಾರ್ ಸ್ಟೀಲ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ದರಗಳಲ್ಲಿ ಏರಿಕೆಯಾಗಿದ್ದರಿಂದ, ಸಹಜವಾಗಿ ಉತ್ಪಾದಕ ವೆಚ್ಚದಲ್ಲಿ ಹೆಚ್ಚಳವಾಗಿದೆ.ಜಾಗತಿಕ ಮಟ್ಟದಲ್ಲಿ ಉಕ್ಕು ದರಗಳಲ್ಲಿ ಏರಿಕೆಯಾಗಿದ್ದರಿಂದ,ದೇಶಿಯ ಉಕ್ಕು ಮಾರುಕಟ್ಟೆಯ ದರಗಳಲ್ಲಿ ಏರಿಕೆಯಾಗಿದೆ ಎಂದು ಸೇಲ್ ಮುಖ್ಯಸ್ಥ ರೊಂಗ್ಟಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ