ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಬಿಡ್‌ : ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆ (3Gspectrum | BWA | Licence | Investments | Mobile market)
Bookmark and Share Feedback Print
 
ಬಹುನಿರೀಕ್ಷಿತ 3ಜಿ ತರಂಗಾಂತರಗಳ ಹರಾಜು ಮುಂದಿನ ವಾರದಲ್ಲಿ ನಡೆಯಲಿದ್ದು, ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಹೈ ಸ್ಪೀಡ್ 3ಜಿ ತರಂಗಾಂತರಗಳ ಸೇವೆ ಶೀಘ್ರದಲ್ಲಿ ಮೊಬೈಲ್ ಗ್ರಾಹಕರಿಗೆ ಲಭ್ಯವಾಗಲಿದೆ.

ಕಳೆದ ಕೆಲ ವರ್ಷಗಳ ಅವಧಿಯಲ್ಲಿ ವಿಶ್ವದ ಬೃಹತ್ 3ಜಿ ತರಂಗಾಂತರ ಹರಾಜು ನಡೆಯಲಿದ್ದು, 3ಜಿ ಹಾಗೂ 2ಜಿ ತರಂಗಾಂತರಗಳ ಹರಾಜಿನಿಂದ ಸರಕಾರಕ್ಕೆ ತಲಾ 8 ಬಿಲಿಯನ್ ಡಾಲರ್ ನಿವ್ವಳ ಆದಾಯವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

3ಜ ತರಂಗಾಂತರಗಳ ಹರಾಜು ಏಪ್ರಿಲ್ 9 ರಂದು ಆರಂಭವಾಗಲಿದ್ದು, ಎರಡು ದಿನಗಳ ನಂತರ ಮುಕ್ತಾಯವಾಗಲಿದೆ. 3ಜಿ ಹರಾಜು ಮುಕ್ತಾಯವಾದ ನಂತರ 2ಜಿ ಬಿಡಬ್ಲೂಎ ತರಂಗಾಂತರಗಳ ಹರಾಜು ಆರಂಭವಾಗಲಿದೆ. ದೇಶದ 22 ವಲಯಗಳಿಗೆ ಮೊಬೈಲ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಆರು ಕಂಪೆನಿಗಳು ಬಿಡ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಮೂರು ವಿದೇಶಿ ಕಂಪೆನಿಗಳು ಕೂಡಾ ಸೇರ್ಪಡೆಯಾಗಿವೆ.

ದೇಶದ 22 ವಲಯಗಳಲ್ಲಿ ಕೆಲವಡೆ ಮೂರು 3ಜಿ ತರಂಗಾಂತರಗಳು ಹಾಗೂ ಕೆಲವೆಡೆ ನಾಲ್ಕು 3ಜಿ ತರಂಗಾಂತರಗಳನ್ನು ನೀಡಲಾಗಿದೆ. 3ಜಿ ತರಂಗಾಂತರಗಳ ಹರಾಜಿಗೆ 780 ಮಿಲಿಯನ್ ಮೀಸಲು ದರವನ್ನು ನಿಗದಿಪಡಿಸಿದ್ದರಿಂದ, ಬಿಡ್ ಮೊತ್ತ ಗರಿಷ್ಠ 1ಬಿಲಿಯನ್ ಡಾಲರ್‌ನಿಂದ 2ಬಿಲಿಯನ್ ಡಾಲರ್‌ವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

3ಜಿ ತರಂಗಾಂತರಗಳ ಬಿಡ್ ಪರವಾನಿಗಿ ಮೊತ್ತ ಹಾಗೂ ಸಂಪರ್ಕ ಜಾಲದ ವಿಸ್ತರಣೆಗಾಗಿ ಹೆಚ್ಚಿನ ಆರ್ಥಿಕತೆಯ ಅಗತ್ಯವಿರುವುದರಿಂದ ಟೆಲಿಕಾಂ ಕಂಪೆನಿಗಳು ಅತ್ಯಧಿಕ ಹಣವನ್ನು ಹೂಡಿಕೆ ಮಾಡುವ ಅಗತ್ಯತೆ ಎದುರಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ