ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶಾಖೆಗಳನ್ನು 150ಕ್ಕೇರಿಸಲಿರುವ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ (HDFC Securities | Brokerage firm | Aseem Dhru | JP Morgan Partners)
Bookmark and Share Feedback Print
 
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಾದ್ಯಂತ ಇನ್ನೂ 50 ಶಾಖೆಗಳನ್ನು ತೆರೆಯುವ ಯೋಜನೆ ತನಗಿದೆ ಎಂದು ಶೇರು ದಳ್ಳಾಲಿ ಕ್ಷೇತ್ರದ ಪ್ರಮುಖ ಸಂಸ್ಥೆ 'ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್' ಪ್ರಕಟಿಸಿದೆ.

2010-11ರ ಸಾಲಿನಲ್ಲಿ ನಾವು ದೇಶದ 20 ನಗರಗಳಲ್ಲಿ 50ರಷ್ಟು ಹೆಚ್ಚುವರಿ ಶಾಖೆಗಳನ್ನು ತೆರೆಯಲಿದ್ದೇವೆ. ಇದರೊಂದಿಗೆ ಮಾರ್ಚ್ 2011ರ ಹೊತ್ತಿಗೆ ನಮ್ಮ ಸಂಸ್ಥೆಯ ಒಟ್ಟು ಶಾಖೆಗಳ ಸಂಖ್ಯೆ 150ಕ್ಕೆ ಏರಲಿದೆ ಎಂದು 'ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್' ವ್ಯವಸ್ಥಾಪಕ ನಿರ್ದೇಶಕ ಆಸೀಮ್ ದ್ರೂ ತಿಳಿಸಿದ್ದಾರೆ.

ಹೂಡಿಕೆಯ ಪ್ರಮಾಣದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಆಸೀಮ್, ಇಲ್ಲಿ ಹೂಡಿಕೆ ಮಾಡಲು ಪ್ರಸಕ್ತ ಬಂಡವಾಳದಿಂದ ನಿಧಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದರು.

ಕಳೆದ ವರ್ಷ ಸಂಸ್ಥೆಯು 56 ನೂತನ ಶಾಖೆಗಳನ್ನು ತೆರೆದಿತ್ತು ಎಂದೂ ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಜೆಪಿ ಮೋರ್ಗನ್ ಪಾರ್ಟ್‌ನರ್ಸ್ ಮತ್ತು ಅವರ ಸಹಾಯಕ ಸಂಸ್ಥೆಗಳಿಂದ ನಡೆಸಲ್ಪಡುವ ಶೇರು ದಳ್ಳಾಲಿ ಕ್ಷೇತ್ರದ ಈ ಸಂಸ್ಥೆಯು ಪ್ರಸಕ್ತ ಒಂಬತ್ತು ಲಕ್ಷ ಗ್ರಾಹಕರನ್ನು ಹೊಂದಿದ್ದು, ದೇಶದಾದ್ಯಂತ ಕನಿಷ್ಠ 2,000 ನೌಕರರನ್ನು ಹೊಂದಿದೆ.

ಪ್ರಸಕ್ತ ಕಂಪನಿಯು ದೇಶದ 65 ನಗರಗಳಲ್ಲಿ 100 ಶಾಖೆಗಳನ್ನಷ್ಟೇ ಹೊಂದಿದೆ. ಈ ಶಾಖೆಗಳು ಶೇರು ದಳ್ಳಾಲಿತನ, ಆರ್ಥಿಕ ಯೋಜನೆ ಮತ್ತು ಚಿಲ್ಲರೆ ಮಾರಾಟ ಸೇರಿದಂತೆ ಇನ್ನಿತರ ಶೇರು ಸಂಬಂಧಿ ಮಧ್ಯಸ್ಥಿಕೆ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ