ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2010-11ರಲ್ಲಿ ತೈಲ ಕಂಪನಿಗಳಿಗೆ 80,000 ಕೋಟಿ ನಷ್ಟ? (petrol | diesel | Indian Oil | Bharat Petroleum)
Bookmark and Share Feedback Print
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 85 ಡಾಲರ್ ಆಸುಪಾಸಿನಲ್ಲೇ ಇದ್ದು, ಇತ್ತ ಸರಕಾರವೂ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚು ಮಾಡದೇ ಇದ್ದಲ್ಲಿ ಸಾರ್ವಜನಿಕ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳ 2010-2011ರ ಸಾಲಿನ ನಷ್ಟ ಶೇ.66ಕ್ಕೇರುವ ಮೂಲಕ 80,000 ಕೋಟಿ ರೂಪಾಯಿಗಳನ್ನು ತಲುಪಲಿದೆ.

ಅಂದಾಜುಗಳ ಪ್ರಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಾಟದಿಂದ 2009-10ನೇ ಸಾಲಿನಲ್ಲಿ ಈ ಮೂರು ತೈಲ ಕಂಪನಿಗಳು ಸರಿಸುಮಾರು 48,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿವೆ. ಅಲ್ಲದೆ 2009-10ನೇ ಸಾಲಿನಲ್ಲಿ ಬಾಕಿ ಉಳಿಯಲಿರುವ ಮೊತ್ತ 45,000 ಕೋಟಿ ರೂಪಾಯಿಗಳೆಂದು ಅಂದಾಜು ಮಾಡಿದ್ದುದು 48,000 ಕೋಟಿ ರೂಪಾಯಿಗಳಿಗೆ ತಲುಪಿತ್ತು. 2009-10ನೇ ಸಾಲಿನಲ್ಲಿ ಜಾಗತಿಕ ಅರ್ಥವ್ಯವಸ್ಥೆ ಕುಸಿತದಿಂದಾಗಿ ಕಚ್ಚಾ ತೈಲ ದರವು ಕುಸಿದ ಕಾರಣದಿಂದ ನಷ್ಟವೂ ಕಡಿಮೆಯಾಗಿತ್ತು. ಆದರೆ ಇದೀಗ ವಿಶ್ವ ಆರ್ಥಿಕ ವ್ಯವಸ್ಥೆ ಚೇತರಿಸಿಕೊಂಡಿದ್ದು, ಕಚ್ಚಾ ತೈಲ ದರ ಮೇಲಕ್ಕೇರುತ್ತಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿ ಅಧಿಕಾರಿಗಳ ಪ್ರಕಾರ ಪ್ರಸಕ್ತ ಪ್ರತಿ ಲೀಟರ್ ಪೆಟ್ರೋಲಿನಲ್ಲಿ 6.12 ರೂಪಾಯಿ, ಡೀಸೆಲ್‌ನಲ್ಲಿ 4.60 ರೂಪಾಯಿಗಳನ್ನು ಕಂಪನಿಗಳು ಕಳೆದುಕೊಳ್ಳುತ್ತಿವೆ. ಅದರಲ್ಲೂ ಹೆಚ್ಚು ನಷ್ಟ ಅನುಭವಿಸುತ್ತಿರುವುದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಮಾರಲ್ಪಡುವ ಸೀಮೆಎಣ್ಣೆಯಲ್ಲಿ. ಅದೂ ತಡವಾಗಿ ಸರಕಾರದಿಂದ ಪಾವತಿಯಾಗುವ ಮೊತ್ತ. ಇದರಲ್ಲಿ ಪ್ರತಿ ಲೀಟರಿನಲ್ಲಿ ಕಂಪನಿಯು 18.42 ರೂಪಾಯಿಗಳನ್ನು ಕಳೆದುಕೊಳ್ಳುತ್ತಿದೆ. ಅಡುಗೆ ಅನಿಲದ ಪ್ರತಿ ಸಿಲಿಂಡರಿನಲ್ಲಿ 265.27 ರೂಪಾಯಿಗಳ ನಷ್ಟವಾಗುತ್ತಿದೆ.

2009-10ರ ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಾಟದಿಂದ ಆಗಿರುವ ನಷ್ಟಕ್ಕೆ ಸರಕಾರ ನೀಡಿರುವುದು ಕೇವಲ 12,000 ಕೋಟಿ ರೂಪಾಯಿ ಮಾತ್ರ. ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದ್ದ ಕಾರಣ ನಷ್ಟ ಮತ್ತೂ ಹೆಚ್ಚಾಗಿತ್ತು. ಆದರೆ ಸರಕಾರ ಇನ್ನೂ ಯಾವುದೇ ಪಾವತಿಯನ್ನು ಮಾಡಿಲ್ಲ.

ನೀಡಿರುವ ಒಟ್ಟಾರೆ 12,000 ಕೋಟಿ ರೂಪಾಯಿಗಳಲ್ಲಿ ಇಂಡಿಯನ್ ಆಯಿಲ್ 7,100.18 ಕೋಟಿ, ಭಾರತ್ ಪೆಟ್ರೋಲಿಯಂ 2,370.77 ಕೋಟಿ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ 2,529.05 ಕೋಟಿ ರೂಪಾಯಿಗಳನ್ನು ಹಂಚಿಕೊಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ