ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶದ ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆಗೆ ಕತಾರ್ ಆಸಕ್ತಿ (Qatar | Infrastructure sector | India | Power sector | Invest)
Bookmark and Share Feedback Print
 
ದೇಶದ ವಿದ್ಯುತ್ ವಿಭಾಗದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಕತಾರ್ ಆಸಕ್ತಿ ವಹಿಸಿದೆ. ಭಾರತ ಮತ್ತು ಕತಾರ್ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್ ವಿಭಾಗದ ಮೂಲಸೌಕರ್ಯ ಕ್ಷೇತ್ರಗಳಲ್ಲಿನ ಹೂಡಿಕೆ ಕುರಿತಂತೆ ಚರ್ಚಿಸಲು ಭಾರತದ ಅಧಿಕಾರಿಗಳ ನಿಯೋಗ, ಶೀಘ್ರದಲ್ಲಿ ಕತಾರ್‌ಗೆ ತೆರಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಕತಾರ್ ದೇಶದ ಉದ್ಯಮಿಗಳು ಆಸಕ್ತಿ ವಹಿಸಿದ್ದು, ಶೀಘ್ರದಲ್ಲಿ ಘೋಷಣೆ ಹೊರಬೀಳಲಿದೆ ಎಂದು ಕತಾರ್‌ನಲ್ಲಿರುವ ಭಾರತದ ರಾಯಭಾರಿ ದೀಪಾ ಗೋಪಾಲನ್ ವಾದ್ವಾ ಹೇಳಿದ್ದಾರೆ.

ದೇಶದ ವಿದ್ಯುತ್ ಕ್ಷೇತ್ರದಲ್ಲಿ ವಿದೇಶಿ ಕಂಪೆನಿಗಳಿಗೆ ಶೇ.100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರಕಾರ ಅನುಮತಿ ನೀಡಿರುವುದರಿಂದ ಹಲವಾರು ದೇಶಗಳು ಭಾರತದಲ್ಲಿ ಹೂಡಿಕೆಗೆ ಯೋಜನೆಗಳನ್ನು ರೂಪಿಸುತ್ತಿವೆ.

ದೇಶದ ವಿದ್ಯುತ್ ಕ್ಷೇತ್ರಕ್ಕೆ 90,000 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆಗಾಗಿ 167 ಬಿಲಿಯನ್ ಡಾಲರ್ ಹೂಡಿಕೆಯ ಅಗತ್ಯವಿದ್ದು, ವಿಶ್ವದ ಬೃಹತ್ ಐದನೇ ವಿದ್ಯುತ್ ಉತ್ಪಾದನೆಯ ರಾಷ್ಟ್ರವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ