ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಂಗೂರ್ ಭೂಮಿಗೆ 1ಕೋಟಿ ರೂ.ಬಾಡಿಗೆ ಪಾವತಿ:ಟಾಟಾ (Tata Motors | Nano | Singur | WBIDC | West Bengal)
Bookmark and Share Feedback Print
 
ನ್ಯಾನೋ ಕಾರು ತಯಾರಿಕೆ ಉದ್ದೇಶಕ್ಕಾಗಿ ಸರಕಾರದಿಂದ ಲೀಸ್‌ಗೆ ಪಡೆಯಲಾಗಿದ್ದ ಸಿಂಗೂರ್ ಭೂಮಿಗಾಗಿ, ಮುಂದಿನ ಮಾರ್ಚ್ ತಿಂಗಳ ಅವಧಿಯವರೆಗಿನ ಲೀಸ್ ಬಾಡಿಗೆ 1ಕೋಟಿ ರೂಪಾಯಿಯನ್ನು ಪಾವತಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.

ಟಾಟಾ ಮೋಟಾರ್ಸ್ ವಾಹನೋದ್ಯಮ ಸಂಸ್ಥೆ, ಮುಂದಿನ ಮಾರ್ಚ್ ತಿಂಗಳ ಅವಧಿಯವರೆಗಿನ ಲೀಸ್ ಬಾಡಿಗೆ 1ಕೋಟಿ ರೂಪಾಯಿಯನ್ನು ಪಾವತಿಸಿದೆ ಎಂದು ವೆಸ್ಟ್‌ ಬೆಂಗಾಲ್ ಇಂಡಸ್ಟ್ರೀಯಲ್ ಡೆವಲೆಪ್‌ಮೆಂಟ್ ಕಾರ್ಪೋರೇಶನ್ (ಡಬ್ಲೂಬಿಐಡಿಸಿ)ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಕಳೆದ 2008ರ ಅಕ್ಟೋಬರ್ ತಿಂಗಳ ಅವಧಿಯಲ್ಲಿ ರೈತರ ವಿರೋಧದಿಂದಾಗಿ, ಪಶ್ಚಿಮ ಬಂಗಾಳದ ಸಿಂಗೂರಿನಿಂದ ನ್ಯಾನೋ ಘಟಕವನ್ನು ಸ್ಥಳಾಂತರಿಸಿ ಗುಜರಾತ್‌ನ ಸನಂದ್‌ ನಗರಕ್ಕೆ ಸ್ಥಳಾಂತರಿಸಲಾಗಿತ್ತು.

ಟಾಟಾ ಮೋಟಾರ್ಸ್ ಸಂಸ್ಥೆ ಸಿಂಗೂರ್ ಭೂಮಿಯನ್ನು ಮರಳಿ ಪಡೆಯುವ ಬಗ್ಗೆ ಚಿಂತನೆ ನಡೆಸುತ್ತಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಟಾಟಾ ವಕ್ತಾರರು, ಲೀಸ್ ಬಾಡಿಗೆಯನ್ನು ನಿರಂತರವಾಗಿ ಪಾವತಿಸುತ್ತಿರುವುದರಿಂದ, ಭೂಮಿ ನಮ್ಮ ವಶದಲ್ಲಿದೆ ಎನ್ನುವುದು ಸಾಬೀತಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ