ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೂಪಾಯಿ ಮೌಲ್ಯ ಏರಿಕೆಗೆ ಕಳವಳಪಡಬೇಕಾಗಿಲ್ಲ:ಸರಕಾರ (Rupee | India | Government | Dollar | Finance secretary | Forex)
Bookmark and Share Feedback Print
 
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರಿಗೆ, ರೂಪಾಯಿ ಮೌಲ್ಯದಲ್ಲಿ ನಿರಂತರ ಏರಿಕೆಯಾಗುತ್ತಿರುವುದು ಸರಕಾರದ ಕಳವಳಕ್ಕೆ ಕಾರಣವಾಗಿಲ್ಲ ಎಂದು ವಿತ್ತಸಚಿವಾಲಯದ ಕಾರ್ಯದರ್ಶಿಗಳು ಹೇಳಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ನಗದು ಹಣದ ಹರಿವು ಹೆಚ್ಚಳವಾಗಿದೆ. ಮುಂದಿನ ಬೆಳವಣಿಗೆಗಳ ಬಗ್ಗೆ ನಿರೀಕ್ಷಿಸಿ ಗಮನಹರಿಸಬೇಕಾಗುತ್ತದೆ ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಚಾವ್ಲಾ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಅಮೆರಿಕದ ಕರೆನ್ಸಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಶೇ.10ಕ್ಕಿಂತ ಹೆಚ್ಚಿನ ಏರಿಕೆ ಕಂಡಿದೆ.

3ಜಿ ತರಂಗಾಂತರಗಳ ಬಿಡ್ ಪ್ರಸಕ್ತ ತಿಂಗಳಲ್ಲಿ ನಡೆಯುತ್ತಿದ್ದು, ಟೆಲಿಕಾಂ ಕಂಪೆನಿಗಳು ಭಾರಿ ಪ್ರಮಾಣದ ಬಿಡ್‌ ಸಲ್ಲಿಸುವ ನಿರೀಕ್ಷೆಗಳಿವೆ ಎಂದು ಕೇಂದ್ರದ ವಿತ್ತ ಖಾತೆ ಕಾರ್ಯದರ್ಶಿ ಅಶೋಕ್ ಚಾವ್ಲಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ