ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶದ ಉಕ್ಕು ಉತ್ಪಾದನೆಯಲ್ಲಿ ಶೇ.4.2ರಷ್ಟು ಹೆಚ್ಚಳ (Steel | Output | Housing sectors | Financial year | Demand)
Bookmark and Share Feedback Print
 
ಗೃಹ ನಿರ್ಮಾಣ ಕ್ಷೇತ್ರ, ರಸ್ತೆ ಮತ್ತು ವಾಹನೋದ್ಯಮ ಕ್ಷೇತ್ರದ ಬೇಡಿಕೆ ಹೆಚ್ಚಳದಿಂದಾಗಿ, ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 59.57 ಮಿಲಿಯನ್ ಟನ್ ಉಕ್ಕು ಉತ್ಪಾದಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಉಕ್ಕು ಉತ್ಪಾದನೆಯಲ್ಲಿ ಶೇ.4.2ರಷ್ಟು ಏರಿಕೆ ಕಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

2010ರ ಮಾರ್ಚ್ 31ಕ್ಕೆ ಆರ್ಥಿಕ ವರ್ಷ ಅಂತ್ಯಗೊಂಡಂತೆ, ದೇಶದ ಉಕ್ಕು ಬೇಡಿಕೆಯಲ್ಲಿ ಶೇ.7.6ರಷ್ಟು ಏರಿಕೆಯಾಗಿ 56.32 ಮಿಲಿಯನ್ ಟನ್‌‌ಗಳಿಗೆ ತಲುಪಿದೆ. ಉಕ್ಕು ಅಮುದಿನಲ್ಲಿ ಶೇ.23ರಷ್ಟು ಹೆಚ್ಚಳವಾಗಿ 7.18 ಮಿಲಿಯನ್ ಟನ್‌ಗಳಿಗೆ ತಲುಪಿದೆ ಎಂದು ಉಕ್ಕು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ಕು ರಫ್ತು ವಹಿವಾಟಿನಲ್ಲಿ 28.7ರಷ್ಟು ಹೆಚ್ಚಳವಾಗಿ 3.16 ಮಿಲಿಯನ್ ಟನ್‌ಗಳಿಗೆ ಕುಸಿತವಾಗಿದೆ.ಬಿಡುಗಡೆಯಾದ ಅಂಕಿ ಅಂಶಗಳು ತಾತ್ಕಾಲಿಕವಾಗಿದ್ದು, ನಂತರದ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶ್ವದ ಉಕ್ಕು ತಯಾರಿಕೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದು, ವಾರ್ಷಿಕವಾಗಿ 72 ಮಿಲಿಯನ್ ಟನ್ ಉಕ್ಕು ಉತ್ಪಾದಿಸುತ್ತಿದೆ.ಮುಂಬರುವ 2012ರ ವೇಳೆಗೆ 115 ಮಿಲಿಯನ್ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ