ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂದಿನ ಮೂರು ವರ್ಷಗಳಲ್ಲಿ ಟೆಲಿ-ಸಾಂದ್ರತೆ ದ್ವಿಗುಣ:ರಾಜಾ (Phone connections | Telecom Policy | A Raja | 3G mobile | BSNL)
Bookmark and Share Feedback Print
 
ನ್ಯಾಷನಲ್ ಟೆಲಿಕಾಂ ಪಾಲಿಸಿ-1999ರ ಅಡಿಯಲ್ಲಿ ಮುಂಬರುವ 2012ರ ವೇಳೆಗೆ 600 ಮಿಲಿಯನ್ ದೂರವಾಣಿ ಸಂಪರ್ಕ ನೀಡುವ ಗುರಿಯನ್ನು ಸಾಧಿಸಲಾಗಿದ್ದು,ಗ್ರಾಮೀಣ ಭಾಗಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದ್ವಿಗುಣವಾಗಲಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಎ.ರಾಜಾ ಹೇಳಿದ್ದಾರೆ .

ಪ್ರತಿ ತಿಂಗಳು ಎರಡು ಕೋಟಿಗಳಿಗೆ ಮೀರಿ ದೂರವಾಣಿ ಸಂಪರ್ಕ ನೀಡಲಾಗುತ್ತಿದೆ ಎಂದು ಬಿಎಸ್‌ಎನ್‌ಎಲ್ 3ಜಿ ಮೊಬೈಲ್ ಸೇವೆಯನ್ನು ಉದ್ಗಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ನ್ಯಾಷನಲ್ ಟೆಲಿಕಾಂ ಪಾಲಿಸಿ-1999ರ ಅಡಿಯಲ್ಲಿ ಮುಂಬರುವ 2012ರ ವೇಳೆಗೆ 600 ಮಿಲಿಯನ್ ದೂರವಾಣಿ ಸಂಪರ್ಕ ನೀಡುವ ಗುರಿಯನ್ನು ಸಾಧಿಸಲಾಗಿದ್ದು, ಹೆಚ್ಚುವರಿಯಾಗಿ 650 ಮಿಲಿಯನ್ ಸಂಪರ್ಕಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವ ರಾಜಾ ತಿಳಿಸಿದ್ದಾರೆ.

ದೇಶದ ಗ್ರಾಮೀಣ ಭಾಗಗಳಲ್ಲಿ ಟೆಲಿ-ಸಾಂದ್ರತೆ ಇದೀಗ ಶೇ.10ರಷ್ಟಿದ್ದು, ಮುಂಬರುವ ಮೂರು ವರ್ಷಗಳಲ್ಲಿ ದ್ವಿಗುಣವಾಗಲಿದೆ ಎಂದು ಹೇಳಿದ್ದಾರೆ.

ಬಿಎಸ್‌ಎನ್‌ಎಲ್ ವಿಶೇಷವಾಗಿ ಗ್ರಾಮೀಣ ಭಾಗಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು, ಬಿಎಸ್‌ಎನ್‌ಎಲ್ ಸಿಬ್ಬಂದಿ ಖಾಸಗಿ ಟೆಲಿಕಾಂ ಕಂಪೆನಿಗಳ ಸವಾಲನ್ನು ಎದುರಿಸಲು ಸಿದ್ಧವಾಗಿರಬೇಕು ಎಂದು ಸಚಿವ ಎ.ರಾಜಾ ಕರೆ ನೀಡಿದ್ದಾರೆ.

ಬಿಎಸ್‌ಎನ್‌ಎಲ್ ಖಾಸಗಿಕರಣಗೊಳಿಸಲಾಗುತ್ತದೆ ಎನ್ನುವ ಉಹಾಪೋಹದ ವರದಿಗಳ ಬಗ್ಗೆ ಸಿಬ್ಬಂದಿ ಆತಂಕಪಡುವುದು ಬೇಡ. ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದಲ್ಲಿ ಸಿಬ್ಬಂದಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಎ.ಸಚಿವ ರಾಜಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ