ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ:ಪ್ರತಿ 10 ಗ್ರಾಂಗೆ 16,700 ರೂ. (Gold|bullion|silver)
Bookmark and Share Feedback Print
 
ಜಾಗತಿಕ ಮಾರುಕಟ್ಟೆಯ ಚಿನ್ನದ ವಹಿವಾಟಿನಲ್ಲಿ ಕುಸಿತ ಕಂಡಿದ್ದರಿಂದ,ಚಿನ್ನದ ದರ ಪ್ರತಿ 10 ಗ್ರಾಂಗೆ 80 ರೂಪಾಯಿಗಳಷ್ಟು ಇಳಿಕೆಯಾಗಿ 16,700 ರೂಪಾಯಿಗಳಿಗೆ ತಲುಪಿದೆ.

ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣ ದರಗಳಲ್ಲಿ ತಲಾ 80 ರೂಪಾಯಿಗಳ ಇಳಿಕೆಯಾಗಿ ಕ್ರಮವಾಗಿ 16,700 ಮತ್ತು 16,650 ರೂಪಾಯಿಗಳಿಗೆ ಕುಸಿದಿದೆ.

ಚಿನ್ನ ಮತ್ತು ಬೆಳ್ಳಿಯ ಖರೀದಿ ವಹಿವಾಟಿನಲ್ಲಿ ಕುಸಿತವಾಗಿದ್ದರಿಂದ. ಚಿನ್ನದ ದರದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಚಿನಿವಾರಪೇಟೆಯ ವರ್ತಕ ಮೂಲಗಳು ತಿಳಿಸಿವೆ.

ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಯಿಂದ ದೂರವಾಗಿ ಶೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿರುವುದು ಕೂಡಾ ಚಿನ್ನದ ದರ ಇಳಿಕೆಗೆ ಕಾರಣವಾಗಿದೆ.

ಬೆಳ್ಳಿಯ ದರದಲ್ಲಿ ಕೂಡಾ ಈಗಾಗಲೇ ಪ್ರತಿ ಕೆಜಿಗೆ 100 ರೂಪಾಯಿಗಳ ಕುಸಿತ ಕಂಡು 27,550 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಚಿನಿವಾರಪೇಟೆ, ಬೆಳ್ಳಿ