ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಒಂದೇ ದಿನದಲ್ಲಿ 3ಲಕ್ಷ ಆಪಲ್‌ ಐಪ್ಯಾಡ್‌ಗಳ ಮಾರಾಟ (Apple|Apple Inc|iPad)
Bookmark and Share Feedback Print
 
ಆಪಲ್ ಕಂಪೆನಿ ಒಂದು ದಿನದ ಅವಧಿಯಲ್ಲಿ 3 ಲಕ್ಷ ಐಪ್ಯಾಡ್‌‌ಗಳನ್ನು ಮಾರಾಟದ ದಾಖಲೆಯ ವಹಿವಾಟು ನಡೆಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಗುಡ್‌ಫ್ರೈಡೆ ನಿಮಿತ್ಯ ಹಲವಾರು ಮಳಿಗೆಗಳು ಮುಚ್ಚಲ್ಪಟ್ಟಿದ್ದವು. ಆದರೆ ಕೆಲ ಮಳಿಗೆಗಳು ತೆರೆದಿದ್ದರಿಂದ ಸುಮಾರು 250,000 ದಿಂದ 350,000 ಐಪ್ಯಾಡ್‌ಗಳನ್ನು ಮಾರಾಟ ಮಾಡಲಾಗಿದೆ.ಆರಂಭಿಕ 12 ತಿಂಗಳುಗಳ ಅವಧಿಯಲ್ಲಿ 5 ಮಿಲಿಯನ್ ಐಪ್ಯಾಡ್‌ಗಳ ಮಾರಾಟದ ಗುರಿಯನ್ನು ದಾಖಲಿಸುವ ಸಾಧ್ಯತೆಗಳಿವೆ ಎಂದು ವಾಲ್‌ಸ್ಟ್ರೀಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಒಂದು ವರ್ಷದ ಅವಧಿಯಲ್ಲಿ ನಿರೀಕ್ಷೆಗೆ ಮೀರಿ ಐಪ್ಯಾಡ್‌‌ಗಳ ಮಾರಾಟವಾಗುವ ಸಾಧ್ಯತೆಗಳಿದ್ದು, ಶೇರುಪೇಟೆಯಲ್ಲಿ ಆಪಲ್ ಶೇರುಗಳ ದರಗಳಲ್ಲಿ ಏರಿಕೆಯಾಗಲಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ವಾರಂತ್ಯದ ಅವಧಿಯಲ್ಲಿ ಸುಮಾರು 4ಲಕ್ಷ ಐಪ್ಯಾಡ್‌ಗಳ ಮಾರಾಟವಾಗಲಿದೆ ಎಂದು ಬಾರ್ಕಲೆ ಕ್ಯಾಪಿಟಲ್ ಕಂಪೆನಿಯ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾಲ್‌ಸ್ಟ್ರೀಟ್‌ನ ಆರ್ಥಿಕ ತಜ್ಞರಾದ ಕೌಫ್‌ಮ್ಯಾನ್ ಬ್ರದರ್ಸ್‌ನ ಶಾವ್ ವೂ ವಾರಂತ್ಯಕ್ಕೆ 250,000 ದಿಂದ 300,000 ಐಪ್ಯಾಡ್‌ಗಳ ಮಾರಾಟವಾಗಲಿದೆ ಎಂದು ಅಧ್ಯಯನ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಪಲ್, ಆಪಲ್ ಕಂಪೆನಿ, ಐಪ್ಯಾಡ್