ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೈಕ್ರೋಸಾಫ್ಟ್‌ನಿಂದ ಮೊಬೈಲ್ ಸೆಲ್‌ಫೋನ್ ಮಾರುಕಟ್ಟೆಗೆ (Microsoft | Cellphones | Wall Street Journal | US software giant)
Bookmark and Share Feedback Print
 
PTI
ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಸಮಾಜಿಕ ನೆಟ್‌ವರ್ಕ್ ಸೌಲಭ್ಯವಿರುವ, ನೂತನ ಮೊಬೈಲ್ ಹ್ಯಾಂಡ್‌ಸೆಟ್‌‌ಗಳನ್ನು ಮುಂದಿನ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು, ಅಂತರ್ಜಾಲ ದೈತ್ಯ ಸಂಸ್ಥೆ ಮೈಕ್ರೋಸಾಫ್ಟ್‌ ನಿರ್ಧರಿಸಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ನೂತನ ಮೊಬೈಲ್ ಹ್ಯಾಂಡ್‌ಸೆಟ್‌‌ಗಳನ್ನು, ಮುಂದಿನ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಬಗ್ಗೆ ಮೈಕ್ರೋಸಾಫ್ಟ್ ಕಂಪೆನಿಯ ವಕ್ತಾರರು ಖಚಿತಪಡಿಸಿದ್ದು, ಏಪ್ರಿಲ್ 12 ರಂದು ಸ್ಯಾನ್ ಫ್ರಾನ್ಸಿಸ್ಕೊ ನಗರದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.

ಜಪಾನ್‌ನ ಶಾರ್ಪ್ ಕಾರ್ಪೋರೇಶನ್ ಉತ್ಪಾದಿಸಿದ ನೂತನ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು, ಮೈಕ್ರೋಸಾಫ್ಟ್ ಕಂಪೆನಿ ಯೋಜನೆಯನ್ನು ರೂಪಿಸಿದೆ ವಾಲ್‌ಸ್ಟ್ರೀಟ್ ಜರ್ನಲ್ ಪ್ರಕಟಿಸಿದೆ.

ಮೈಕ್ರೋಸಾಫ್ಟ್ ಕಂಪೆನಿ ಮೊಬೈಲ್ ಹ್ಯಾಂಡ್‌ಸೆಟ್‌ಗಳಿಗಾಗಿ ಸಾಫ್ಟ್‌‌ವೇರ್ ವಿನ್ಯಾಸ ಮಾಡಿದ್ದು, ಆನ್‌ಲೈನ್ ಸೇವೆ ಮತ್ತು ಹಾರ್ಡ್‌ವೇರ್‌ಗಳನ್ನು ಅಳಡಿಸಿರುವ ಈ ಯೋಜನೆಗೆ 'ಪಿಂಕ್' ಎಂದು ಕೋಡ್ ಹೆಸರಿಡಲಾಗಿದೆ.

ವೋಡಾಫೋನ್ ಮತ್ತು ವೆರಿಝೊನ್ ಕಮ್ಯೂನಿಕೇಶನ್ಸ್ ಮೊಬೈಲ್ ಕಂಪೆನಿಗಳ ಜಂಟಿ ಸಹಭಾಗಿತ್ವದಲ್ಲಿ, ಮೊಬೈಲ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ.

ಮೊಬೈಲ್ ಹ್ಯಾಂಡ್‌ಸೆಟ್‌ಗಳು ಆರಂಭದಲ್ಲಿ ಕೇವಲ ಅಮೆರಿಕದಲ್ಲಿ ಮಾತ್ರ ಲಭ್ಯವಿದ್ದು, ನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದೊರೆಯಲಿವೆ.
ಸಂಬಂಧಿತ ಮಾಹಿತಿ ಹುಡುಕಿ