ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ: ಪ್ರತಿ 10 ಗ್ರಾಂಗೆ 16,468 ರೂ. (Gold | Global trend | Market | Selling | Bullion market | Gold prices)
Bookmark and Share Feedback Print
 
ಜಾಗತಿಕ ಚಿನ್ನದ ಮಾರುಕಟ್ಟೆಗಳಲ್ಲಿ ವಹಿವಾಟು ಕುಸಿತಗೊಂಡಿದ್ದರಿಂದ, ಚಿನ್ನದ ಸಂಗ್ರಹಕಾರರಿಂದ ಚಿನ್ನದ ಮಾರಾಟದಲ್ಲಿ ಹೆಚ್ಚಳವಾಗಿ ಚಿನ್ನದ ದರ ಪ್ರತಿ 10ಗ್ರಾಂಗೆ 34ರೂಪಾಯಿ ಕುಸಿತವಾಗಿ 16,468 ರೂಪಾಯಿಗಳಿಗೆ ತಲುಪಿದೆ.

ಅಮೆರಿಕ ಹಾಗೂ ಏಷ್ಯಾ ಶೇರುಪೇಟೆಗಳ ವಹಿವಾಟು ಚೇತರಿಕೆಯಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾಗಿದ್ದ ಚಿನ್ನವನ್ನು ಮಾರಾಟ ಮಾಡಿ ಶೇರುಪೇಟೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ.ಇದರಿಂದಾಗಿ ಚಿನ್ನದ ದರದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಜಾಗತಿಕ ಚಿನ್ನದ ಮಾರುಕಟ್ಟೆಗಳಲ್ಲಿ ಚಿನ್ನದ ಮಾರಾಟದ ಭರಾಟೆ ಮುಂದುವರಿದಿರುವುದರಿಂದ, ಚಿನ್ನದ ದರದ ಕುಸಿತಕ್ಕೆ ಕಾರಣವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.

ಏತನ್ಮಧ್ಯೆ, ,ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ, ಪ್ರತಿ ಔನ್ಸ್‌ಗೆ 2.70 ಡಾಲರ್ ಇಳಿಕೆಯಾಗಿ 1128.10 ಡಾಲರ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ