ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ಸ್ಟೀಲ್ ಮಾರಾಟದಲ್ಲಿ ಶೇ.18ರಷ್ಟು ಹೆಚ್ಚಳ (Tata Steel | Sales up | Fiscal | Crude steel | Metal)
Bookmark and Share Feedback Print
 
ದೇಶದ ಉಕ್ಕು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಸ್ಟೀಲ್, 2009-10ರ ಸಾಲಿನ ನಿವ್ವಳ ಮಾರಾಟದಲ್ಲಿ ಶೇ.18ರಷ್ಟು ಏರಿಕೆಯಾಗಿ 6.17 ಮಿಲಿಯನ್ ಟನ್‌ಗಳಿಗೆ ತಲುಪಿದೆ.

2008-09ರ ಸಾಲಿನಲ್ಲಿ 5,232 ಮಿಲಿಯನ್ ಟನ್‌ಗಳಷ್ಟು ಉಕ್ಕು ಮಾರಾಟ ಮಾಡಲಾಗಿತ್ತು ಎಂದು ಟಾಟಾ ಸ್ಟೀಲ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

2008-09ರ ಸಾಲಿನಲ್ಲಿ ವರ್ಷದ ಆರ್ಥಿಕ ಸಾಲಿನ ಅವಧಿಯಲ್ಲಿ 6,254 ಮಿಲಿಯನ್‌ ಟನ್‌ಗಳಷ್ಟು ಉಕ್ಕು ಉತ್ಪಾದಿಸಲಾಗಿತ್ತು. ಆದರೆ 2009 -10ರ ಸಾಲಿನಲ್ಲಿ ಉತ್ಪಾದನೆಯಲ್ಲಿ ಶೇ.16ರಷ್ಟು ಹೆಚ್ಚಳವಾಗಿ 7,231 ಮಿಲಿಯನ್ ಟನ್‌‌ಗಳಷ್ಟು ಉಕ್ಕು ಉತ್ಪಾದಿಸಲಾಗಿದೆ.

ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಕೂಡಾ ಶೇ.16 ರಷ್ಟು ಹೆಚ್ಚಳವಾಗಿ 6,439 ಮಿಲಿಯನ್ ಟನ್‌ಗಳಿಗೆ ತಲುಪಿದೆ.2008-09ರ ಅವಧಿಯಲ್ಲಿ 5,375 ಮಿಲಿಯನ್ ಟನ್‌ಗಳಷ್ಟು ಉಕ್ಕು ಉತ್ಪಾದಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ