ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೋಧಿ ದರ : ಕ್ವಿಂಟಾಲ್‌ಗೆ 25 ರೂಪಾಯಿ ಇಳಿಕೆ (Wheat | Prices | Stockists | Government)
Bookmark and Share Feedback Print
 
ದೇಶಿಯ ಸಗಟು ಮಾರುಕಟ್ಟೆಗೆ ಗೋಧಿ ಬೆಳೆ ಹೆಚ್ಚಿನ ಮಟ್ಟದಲ್ಲಿ ಆಗಮಿಸುತ್ತಿರುವುದರಿಂದ, ಪ್ರತಿ ಕ್ವಿಂಟಾಲ್‌ಗೆ 25 ರೂಪಾಯಿ ದರ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಗೋಧಿ ಬೆಳೆಯವ ರಾಜ್ಯಗಳಲ್ಲಿ ಉತ್ಪಾದನೆ ಹೆಚ್ಚಳವಾಗಿದ್ದು, ಮಾರಾಟಕ್ಕಾಗಿ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದರಿಂದ ಗೋಧಿ ದರದಲ್ಲಿ ಇಳಿಕೆಗೆ ಕಾರಣವಾಗಿದೆ. ಸಂಗ್ರಹಕಾರರು ಮತ್ತು ಗಿರಿಣಿಗಳ ಮಾಲೀಕರು ಕೂಡಾ ಗೋಧಿ ಸಂಗ್ರಹವನ್ನು ಕಡಿಮೆ ಮಾಡಿದ್ದರಿಂದ, ದರದಲ್ಲಿ ಇಳಿಮುಖವಾಗುತ್ತಿದೆ ಎಂದು ಮಾರುಕಟ್ಟೆಯ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

ಗೋಧಿ ದರ ಪ್ರತಿ ಕ್ವಿಂಟಾಲ್‌ಗೆ 25 ರೂಪಾಯಿ ಕುಸಿತವಾಗಿ 1600-1800 ರೂಪಾಯಿಗಳಿಗೆ ತಲುಪಿದೆ. ಗೋಧಿ ಹಿಟ್ಟಿನ ದರದಲ್ಲಿ 10 ರೂಪಾಯಿ ಕುಸಿತವಾಗಿ 1,125-1,130 ರೂಪಾಯಿಗಳಿಗೆ ತಲುಪಿದೆ.

ಮೈದಾ ಹಿಟ್ಟು ಮತ್ತು ಸೋಜಿ ದರದಲ್ಲಿ ಕೂಡಾ ಪ್ರತಿ 50 ಕೆಜಿಗೆ ಕ್ರಮವಾಗಿ 700-730 ಮತ್ತು 740-760 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋಧಿ, ದರ ಏರಿಕೆ, ಸರಕಾರ