ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಬಿಐ ಸಾಲದ ಬಡ್ಡಿ ದರದಲ್ಲಿ ಶೀಘ್ರ ಹೆಚ್ಚಳ:ಭಟ್ (SBI | Rates | RBI | monetary policy | OP Bhatt)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಮುಂದಿನ ಕೆಲ ತಿಂಗಳುಗಳಲ್ಲಿ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 20 ರಂದು ವಾರ್ಷಿಕ ಆರ್ಥಿಕ ನೀತಿಗಳ ಪರಿಷ್ಕರಣೆ ನಡೆಸಲಿರುವುದರಿಂದ, ತದ ನಂತರ ಬಡ್ಡಿ ದರ ಏರಿಕೆ ಕುರಿತಂತೆ ನಿರ್ಧರಿಸಲಾಗುವುದು ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ ಭಟ್ ತಿಳಿಸಿದ್ದಾರೆ.

ಎಸ್‌ಬಿಐ ಬ್ಯಾಂಕ್, ಮುಂಬರುವ 2012ರ ವೇಳೆಗೆ ಸಾಲದ ವಹಿವಾಟನ್ನು 100 ಬಿಲಿಯನ್ ಡಾಲರ್‌ಗಳಿಂದ 200 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿಸುವ ಸಾಧ್ಯತೆಗಳಿವೆ ಎಂದು ಭಟ್ ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ, ಎಸ್‌ಬಿಐ ಬ್ಯಾಂಕ್ ಹೆಚಚಿನ ನಗದು ಹರಿವನ್ನು ಹೊಂದಿದೆ. ಬಂಡವಾಳದ ಅಗತ್ಯವಿಲ್ಲ. ಆದರೆ ಮಧ್ಯಮ ಅವಧಿಯಿಂದ ದೀರ್ಘಾವಧಿಗಾಗಿ ಬಂಡವಾಳ ಸಂಗ್ರಹಿಸಲಾಗುವುದು ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ