ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಪ್ರಿಲ್ 9 ರಂದು 3ಜಿ ತರಂಗಾಂತರ ಹರಾಜು ಆರಂಭ (3G|Bharti Airtel|Reliance communications)
Bookmark and Share Feedback Print
 
3ಜಿ ತರಂಗಾಂತರಗಳ ಬಿಡ್ ಏಪ್ರಿಲ್ 9 ರಂದು ನಡೆಯಲಿದ್ದು, ಭಾರತದ ಒಂಬತ್ತು ಟೆಲಿಕಾಂ ಕಂಪೆನಿಗಳು ಬಿಡ್ ಸಲ್ಲಿಸಿದ್ದು,ಬಿಡ್‌ನಲ್ಲಿ ಬಿಲಿಯನ್‌ಗಟ್ಟಲೆ ಡಾಲರ್‌ಗಳ ಹರಾಜು ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರದಿಂದ ಆರಂಭವಾಗಲಿರುವ 3ಜಿ ಬಿಡ್‌ ಹರಾಜಿನಿಂದಾಗಿ 8 ಬಿಲಿಯನ್ ಡಾಲರ್ ಹಣ ಸಂಗ್ರಹವಾಗಲಿದೆ ಎಂದು ಸರಕಾರ ಆಶಾಭಾವನೆಯನ್ನು ವ್ಯಕ್ತಪಡಿಸಿದೆ.

ಗ್ರಾಹಕರನ್ನು ಸೆಳೆಯಲು 3ಜಿ ಮೊಬೈಲ್ ಸೇವೆ ಅಗತ್ಯವಾಗಿದ್ದರಿಂದ ಪ್ರಮುಖ ಕಂಪೆನಿಗಳು ಹೆಚ್ಚಿನ ಬಿಡ್ ಘೋಷಿಸುವ ಸಾಧ್ಯತೆಗಲಿವೆ ಎಂದು ಟೆಲಿಕಾಂ ಇಲಾಖೆಯ ವ್ಯವಸ್ತಾಪಕ ನಿರ್ದೇಶಕ ಕುಣಾಲ್ ಬಜಾಜ್ ತಿಳಿಸಿದ್ದಾರೆ.

3ಜಿ ತರಂಗಾಂತರಗಳ ಮೀಸಲು ದರವನ್ನು 780 ಮಿಲಿಯನ್ ಡಾಲರ್‌ಗಳಿಗೆ ನಿಗದಿಪಡಿಸಲಾಗಿದ್ದು, ಬಿಡ್‌ನಲ್ಲಿ ಒಂಬತ್ತು ಪ್ರಮುಖ ಕಂಪೆನಿಗಳು ಪಾಲ್ಗೊಳ್ಳಲಿರುವುದರಿಂದ ಹರಾಜು ಮೊತ್ತದಲ್ಲಿ ಭಾರಿ ಏರಿಕೆಯಾಗಲಿದೆ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ವಿಶ್ವದಲ್ಲಿ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಲ್ಲಿ 3ಜಿ ಸ್ಪೆಕ್ಟ್ರಂಗಳನ್ನು ಪಡೆಯಲು ದೇಶ ,ವಿದೇಶಗಳ ಒಂಬತ್ತು ಕಂಪೆನಿಗಳು ಯೋಜನೆಗಳನ್ನು ರೂಪಿಸಿವೆ.

3ಜಿ ತರಂಗಾಂತರಗಳಿಂದ ಮೊಬೈಲ್ ಫೋನ್ ಬಳಕೆದಾರರು ಇಂಟರ್‌ನೆಟ್, ವೀಡಿಯೋ ಕಾನ್ಫ್‌ರೆನ್ಸ್ ಮತ್ತು ಮ್ಯೂಜಿಕ್ ಡೌನ್‌ಲೋಡ್ ಮಾಡಬಹುದಾಗಿದ್ದು, ಇತರ ಕಂಟೆಂಟ್‌‌ಗಳನ್ನು 2ಜಿ ಸೇವೆಗಿಂತ ವೇಗವಾಗಿ ಪಡೆಯಬಹುದಾಗಿದೆ.

ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಕಮ್ಯೂನಿಕೇಶನ್ಸ್ ಟೆಲಿಕಾಂ ಕಂಪೆನಿಗಳು, ವೋಡಾಫೋನ್ ಎಸ್ಸಾರ್ ಮಟ್ಟು ಟಾಟಾ ಡೊಕೊಮೊ ಕಂಪೆನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ